ಸಿಲಬಸ್ ಇಲ್ಲ, ರಿಯಾಲಿಟಿ ಇದೆ: ನಿಮ್ಮ ಸೀನಿಯರ್ ಕೊಡುವ ಟೆಕ್ ಡೋಸ್ ತಗೊಳೋಕೆ ರೆಡೀನಾ? - Tech Vaidya

ಸಿಲಬಸ್ ಇಲ್ಲ, ರಿಯಾಲಿಟಿ ಇದೆ: ನಿಮ್ಮ ಸೀನಿಯರ್ ಕೊಡುವ ಟೆಕ್ ಡೋಸ್ ತಗೊಳೋಕೆ ರೆಡೀನಾ?

ಹಲೋ ಲಾಸ್ಟ್ ಬೆಂಚರ್ಸ್, ಕಾಲೇಜು ಕಲಿಗಳೇ.. ಎಲ್ರೂ ಹೆಗಿದ್ದೀರಿ? 

  ಕಾಲೇಜಿನ ನಾಲ್ಕು ಗೋಡೆಗಳ ಮಧ್ಯೆ, ಆ ಬೋರಿಂಗ್ ಬೆಂಚುಗಳ ಮೇಲೆ ಕುಳಿತು ಮೇಷ್ಟ್ರುಗಳ ಮುಂದೆ ತಲೆ ಆಡಿಸಿ, ನೋಟ್ಸ್ ಕಾಪಿ ಮಾಡಿ ನಿಮಗೆಲ್ಲಾ ಸಿಕ್ಕಾಪಟ್ಟೆ ಬೋರ್ ಹೊಡೆದಿರುತ್ತೆ ಅಂತ ನನಗೆ ಚೆನ್ನಾಗಿ ಗೊತ್ತು. ಇಲ್ಲಿ ನಾನು ನಿಮಗೆ ಪಾಠ ಮಾಡೋಕೆ, ಅಸೈನ್‌ಮೆಂಟ್ ಕೊಡೋಕೆ ಬಂದಿಲ್ಲ. ಬದಲಾಗಿ ನಿಮ್ಮ ಕೆರಿಯರ್ ಗೈಡ್ ಆಗಿ, ನಿಮ್ಮದೇ ಅಡ್ಡಾದಲ್ಲಿ ಕೂತು ಹರಟೆ ಹೊಡೆಯೋ ನಿಮ್ಮ ಸೀನಿಯರ್ ಆಗಿ ಬಂದಿದ್ದೇನೆ. ಟೆಕ್ ವೈದ್ಯ ಅಂದ್ರೆ ನಿಮ್ಮ ತಲೆಯಲ್ಲಿರೋ ತಾಂತ್ರಿಕ ಹುಳುಗಳಿಗೆ ಚಿಕಿತ್ಸೆ ನೀಡೋ ಒಬ್ಬ ಫ್ರೆಂಡ್ಲಿ ವೈದ್ಯ ಅಂದುಕೊಳ್ಳಿ ಅಷ್ಟೇ. ನಮ್ಮ ನಡುವೆ ಇರೋದು ಬರೀ ಜ್ಞಾನದ ಹಂಚಿಕೆಯಲ್ಲ, ಇದು ಅಪ್ಪಟ ರಿಯಲ್ ವರ್ಲ್ಡ್ ಎಕ್ಸ್‌ಪೀರಿಯನ್ಸ್. ಏನ್‌ ಹೇಳಿ..ರಿಯಲ್ ವರ್ಲ್ಡ್ ಎಕ್ಸ್‌ಪೀರಿಯನ್ಸ್! 

ಕಾಲೇಜಿನಲ್ಲಿ ನಿಮಗೆ ಓದಲು ಒಂದು ಸಿಲಬಸ್ ಇರುತ್ತೆ, ಆದರೆ ಇಲ್ಲಿರೋದು ಕೇವಲ ರಿಯಾಲಿಟಿ ಮಾತ್ರ. ಆ ಹಳೆಯ ಪುಸ್ತಕಗಳಲ್ಲಿರೋ ಕೋಡ್‌ಗಳು ಅಥವಾ ಥಿಯರಿಗಳು ಇವತ್ತಿನ ಮಾರ್ಕೆಟ್‌ಗೆ, ಇವತ್ತಿನ ಕಂಪನಿಗಳಿಗೆ ಎಷ್ಟು ಅಪ್ಲೈ ಆಗುತ್ತವೆ ಅನ್ನೋದು ನಿಮಗೂ ಗೊತ್ತು, ನನಗೂ ಗೊತ್ತು. ಎಕ್ಸಾಮ್ ಹಾಲ್ ನಲ್ಲಿ ಬರೆದ ಉತ್ತರ ನೋಡಿ ಕಂಪನಿಗಳು ನಿಮಗೆ ಕೆಲಸ ಕೊಡೋದಿಲ್ಲ, ಬದಲಾಗಿ ನಿಮಗೆ ಪ್ರಾಕ್ಟಿಕಲ್ ಆಗಿ ಕೆಲಸ ಮಾಡೋಕೆ ಬರುತ್ತಾ ಅನ್ನೋದನ್ನ ನೋಡಿ ಮಾತ್ರ ಕೆಂಪು ಹಾಸಿನ ಸ್ವಾಗತ ಕೋರುತ್ತವೆ. ಹಾಗಾಗಿ ಟೆಕ್‌ವೈದ್ಯ ಗ್ಲೋಬಲ್‌ನ ಈ ಹೊಸ ಸರಣಿಯಲ್ಲಿ ನಾವು ಪುಸ್ತಕದ ಬದನೆಕಾಯಿಯ ಬಗ್ಗೆ ತಲೆಕೆಡಿಸಿಕೊಳ್ಳದೆ, ಅಸಲಿ ಮೈದಾನದಲ್ಲಿ ಹೆಂಗೆ ಬ್ಯಾಟಿಂಗ್ ಮಾಡಬೇಕು ಅನ್ನೋದನ್ನ ಕಲಿಯೋಣ.

ನೋಡ್‌ ಮಗಾ, ತಂತ್ರಜ್ಞಾನ ಅಥವಾ ಟೆಕ್ ಅನ್ನೋದು ಯಾವುದೋ ಪರಗ್ರಹದ ಜೀವಿಗಳಿಗೆ ಅಥವಾ ಕೇವಲ ಓದುವ ಗೀಳು ಇರುವ ಬುದ್ಧಿವಂತರಿಗೆ ಮಾತ್ರ ಮೀಸಲಾದ ಬ್ರಹ್ಮವಿದ್ಯೆ ಅಲ್ಲವೇ ಅಲ್ಲ. ನೀವು ಇವತ್ತು ಸ್ಮಾರ್ಟ್‌ಫೋನ್‌ನಲ್ಲಿ ಗಂಟೆಗಟ್ಟಲೆ ರೀಲ್ಸ್ ಸ್ಕ್ರೋಲ್ ಮಾಡ್ತೀರಲ್ಲ, ಅಥವಾ ಆನ್‌ಲೈನ್‌ನಲ್ಲಿ ಬಿರಿಯಾನಿ ಆರ್ಡರ್ ಮಾಡ್ತೀರಲ್ಲ, ಅಷ್ಟೇ ಸಿಂಪಲ್ ಆಗಿ ಟೆಕ್ ಕೂಡ ಕಲಿಯಬಹುದು. ಇದನ್ನ ಯಾವುದೋ ದೊಡ್ಡ ಬೆಟ್ಟ ಅಂತ ಅಂದುಕೊಂಡು ಭಯ ಪಡಬೇಡಿ. ಈ ಭಯನೇ ನಿಮ್ಮ ಪ್ರಗತಿಗೆ ಅಡ್ಡ ನಿಂತಿರೋ ದೊಡ್ಡ ವಿಘ್ನ. ನಿಮಗೆ ಬೇಕಿರೋದು ಕೇವಲ ಕಲಿಯುವ ಕುತೂಹಲ ಮತ್ತು ಸ್ವಲ್ಪ ಕಾಮನ್ ಸೆನ್ಸ್ ಅಷ್ಟೇ. ಇವೆರಡೂ ಇದ್ರೆ ನೀವೇ ಈ ಟೆಕ್ ಲೋಕದ ಅಧಿಪತಿಗಳು.

Tech Vaidya WhatsApp ಚಾನೆಲ್ AI, ಟೆಕ್ ಸುದ್ದಿ, ಸೈಬರ್ ಸುರಕ್ಷತೆ ಮಾಹಿತಿ ಹಾಗೂ ಉಪಯುಕ್ತ ಟೆಕ್ ಟಿಪ್ಸ್ಗಳನ್ನು ಪಡೆಯಲು ನಮ್ಮ WhatsApp ಚಾನೆಲ್ ಸೇರಿ.
ಚಾನೆಲ್ ಸೇರಿ

ನಿಮ್ಮ ಕಾಲೇಜು ದಿನಗಳಲ್ಲಿ ನೀವು ಎಷ್ಟೋ ಸಲ ಬೋರಿಂಗ್ ಕ್ಲಾಸಿನಿಂದ ಎಸ್ಕೇಪ್ ಆಗಿ ಅಡ್ಡಾದಲ್ಲಿ, ಕ್ಯಾಂಟೀನ್ ನಲ್ಲಿ ಅಥವಾ ಮರದ ಕಟ್ಟೆ ಮೇಲೆ ಕೂತಿರ್ತೀರ ಅಲ್ವಾ? ಅಲ್ಲಿ ನಡೆಯೋ ಮುಕ್ತ ಚರ್ಚೆಗಳು, ಅಲ್ಲಿ ಸಿಗೋ ಆ ಒಂದು ಕಿಕ್, ಆ ಫ್ರೀಡಂ ನಿಮಗೆ ಕ್ಲಾಸ್‌ರೂಮ್‌ನಲ್ಲಿ ಖಂಡಿತ ಸಿಗೋದಿಲ್ಲ. ಯಾಕಂದ್ರೆ ಅಡ್ಡಾದಲ್ಲಿ ಮನಸ್ಸು ಬಿಚ್ಚಿ ಮಾತಾಡೋಕೆ ಅವಕಾಶ ಇರುತ್ತೆ. ನಮ್ಮ ಈ ಸ್ಟುಡೆಂಟ್ಸ್ ಅಡ್ಡಾ ಸರಣಿ ಕೂಡ ನಿಮ್ಮ ನೆಚ್ಚಿನ ಆ ಮರದ ಕಟ್ಟೆ ಇದ್ದಂತೆ. ಇಲ್ಲಿ ನಾವು ಕ್ಲಿಷ್ಟಕರವಾದ ತಾಂತ್ರಿಕ ವಿಷಯಗಳನ್ನ ನೀವು ಕುಡಿಯೋ ಸ್ಟ್ರಾಂಗ್ ಕಾಫಿಯಷ್ಟೇ ಸರಳವಾಗಿ ಮಾತಾಡೋಣ. ಯಾವುದೇ ಮುಲಾಜಿಲ್ಲದೆ, ಯಾವುದೇ ಫಾರ್ಮ್ಯಾಲಿಟಿ ಇಲ್ಲದೆ ವಿಷಯವನ್ನ ಡೀಪ್ ಆಗಿ ಡೈಜೆಸ್ಟ್ ಮಾಡಿಕೊಳ್ಳೋಣ.

ಸಾಕಷ್ಟು ಜನ ವಿದ್ಯಾರ್ಥಿಗಳು ಟೆಕ್ ಫೀಲ್ಡ್ ಅಂದ್ರೆ ಕೇವಲ ಕಂಪ್ಯೂಟರ್ ಮುಂದೆ ಕೂತು, ಕಣ್ಣು ಬಿಟ್ಟುಕೊಂಡು ಕೋಡಿಂಗ್ ಮಾಡೋದು ಅಂತಾನೇ ಅಂದುಕೊಂಡಿದ್ದಾರೆ. ಆದರೆ ರಿಯಾಲಿಟಿ ಅದಕ್ಕಿಂತ ತುಂಬಾನೇ ಭಿನ್ನವಾಗಿದೆ. ಇದೊಂದು ದೊಡ್ಡ ಸಮುದ್ರವಿದ್ದಂತೆ. ಇಲ್ಲಿ ಕೋಡಿಂಗ್ ಜೊತೆಗೆ ಲಾಜಿಕ್ ಇದೆ, ನಿಮ್ಮ ಕ್ರಿಯೇಟಿವಿಟಿಗೆ ಜಾಗವಿದೆ, ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ಇದೆ ಮತ್ತು ಅತಿ ಮುಖ್ಯವಾಗಿ ಸ್ಮಾರ್ಟ್ ವರ್ಕ್ ಇದೆ. ನೀವು ಸ್ವಲ್ಪ ಸ್ಮಾರ್ಟ್ ಆಗಿ ಯೋಚನೆ ಮಾಡಿದ್ರೆ ಈ ಫೀಲ್ಡ್ ನಿಮಗೆ ಅಸಾಧ್ಯ ಯಶಸ್ಸನ್ನು ತಂದುಕೊಡುತ್ತೆ. ಆ ಯಶಸ್ಸಿಗೆ ಬೇಕಿರೋ ಗಟ್ಟಿ ಫೌಂಡೇಶನ್ ಅನ್ನು ನಾವು ಈ ಅಡ್ಡಾದಲ್ಲಿ ಹಾಕೋಣ.

ಬಹಳಷ್ಟು ಜನ ಸೀನಿಯರ್ಸ್ ಅಥವಾ ನಿಮ್ಮ ಲೆಕ್ಚರರ್ಸ್ ನಿಮಗೆ ಹೇಳ್ತಿರಬಹುದು, ಈ ಎಐ ಅಥವಾ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಬಂದ್ಮೇಲೆ ಐಟಿ ಫೀಲ್ಡ್ ನಲ್ಲಿ ಕೆಲಸ ಸಿಗೋದು ಕಷ್ಟ, ನಮ್ಮ ಕೆಲಸಗಳೆಲ್ಲಾ ಹೋಗಿಬಿಡುತ್ತವೆ ಅಂತ. ಆದರೆ ಒಂದು ಮಾತು ನೆನಪಿಟ್ಟುಕೊಳ್ಳಿ, ಎಐ ಯಾವತ್ತೂ ನಮ್ಮ ಕೆಲಸ ಕದಿಯೋದಿಲ್ಲ, ಬದಲಾಗಿ ಎಐ ಬಳಸಲು ಗೊತ್ತಿಲ್ಲದವರ ಕೆಲಸವನ್ನ, ಎಐ ಬಳಸಲು ಚೆನ್ನಾಗಿ ಗೊತ್ತಿರುವವರು ಕದಿಯುತ್ತಾರೆ. ಎಐ ಅನ್ನೋದು ನಮಗೆ ಎದುರಾಳಿಯಲ್ಲ, ಅದೊಂದು ಪ್ರಬಲ ಅಸ್ತ್ರ.

ನಿಮಗೆ ಬೇಕಾದ್ರೆ ಕೇಳಿ, ಈ ಎಐ ಏನೆಲ್ಲ ಮಾಡಬಲ್ಲದು, ಅದನ್ನ ಬಳಸಿಕೊಂಡೇ ನಾವು ನಮ್ಮ ಕೆರಿಯರ್ ಅನ್ನು ಹೇಗೆ ಬಿಲ್ಡ್ ಮಾಡಬಹುದು ಅನ್ನೋದಕ್ಕೆ ನಾನು ಭಗವದ್ಗೀತೆನೇ ಬರೆದಿದ್ದೀನಿ. ಹೂಂ ಕಣ್ರೋ, ಭಗವದ್ಗೀತೆನೇ, ಎಐ ಭಗವದ್ಗೀತೆ! (ಈ ಬುಕ್ ಬೇಕಾದ್ರೆ ಹೇಳಿ, ಕಳಿಸಿಕೊಡ್ತೇನೆ)  ಬದಲಾಗುತ್ತಿರುವ ಕಾಲಕ್ಕೆ ತಕ್ಕಂತೆ ನಾವು ಕೂಡ ನಮ್ಮ ಸ್ಕಿಲ್ಸ್ ಅನ್ನು ಅಪ್‌ಡೇಟ್ ಮಾಡಿಕೊಳ್ಳಲೇಬೇಕು. ಇಲ್ಲದಿದ್ದರೆ ಅಪ್‌ಡೇಟ್ ಆಗದ ನಿಮ್ಮ ಫೋನಿನ ಹಳೆಯ ಸಾಫ್ಟ್‌ವೇರ್‌ನಂತೆ ನಾವು ಕೂಡ ಔಟ್‌ಡೇಟ್ ಆಗಿ ಮೂಲೆ ಸೇರಬೇಕಾಗುತ್ತೆ.

ಸಂಬಂಧಿತ ಲೇಖನಗಳು

Related News ಹ್ಯಾಕಿಂಗ್ ಕಲಿಯೋ ಆಸೆನಾ? ಎಥಿಕಲ್ ಹ್ಯಾಕಿಂಗ್ ಅಂದ್ರೆ ಫೇಸ್‌ಬುಕ್ ಪಾಸ್‌ವರ್ಡ್ ಕದಿಯೋದಲ್ಲ
Related News ಓಪನ್ ಸೋರ್ಸ್ (Open Source): ಜ್ಞಾನ ಹಂಚಿದ್ರೆ ಮಾತ್ರ ಬೆಳೆಯೋದು
Related News ಐಡಿಇ (IDE): ಇದು ಕೋಡರ್‌ಗಳ ಪ್ಲೇಗ್ರೌಂಡ್ (VS Code)
Related News ಅಲ್ಗಾರಿದಮ್ (Algorithm): ಅಮ್ಮನ ಸಾಂಬಾರ್ ರೆಸಿಪಿ
Related News ಬಗ್ (Bug) vs ಫೀಚರ್ (Feature): ತಪ್ಪನ್ನ ಒಪ್ಪಿಕೊಳ್ಳೋದು ಒಂದು ಕಲೆ

ನಿಮಗೆ ಗಿಟಾರ್ ಕಲಿಯಬೇಕು ಅನ್ನಿಸಿದಾಗ ನೀವು ಹೋಗಿ ಸಂಗೀತದ ಹಳೆಯ ಶಾಸ್ತ್ರಗಳನ್ನ, ರಾಗಗಳನ್ನ ಓದುತ್ತಾ ಕೂರೋದಿಲ್ಲ, ಬದಲಾಗಿ ಗಿಟಾರ್ ಹಿಡಿದು ತಂತಿ ಮೀಟೋಕೆ, ಸ್ಟ್ರಮ್ ಮಾಡೋಕೆ ಶುರು ಮಾಡ್ತೀರ ಅಲ್ವಾ? ಯಾವುದೇ ವಿದ್ಯೆನ ಕಲಿಯೋದು ಕೂಡ ಹಾಗೇನೇ. ಸುಮ್ಮನೆ ಥಿಯರಿಗಳನ್ನ ಓದುತ್ತಾ, ಬಾಯಿಪಾಠ ಮಾಡಿಕೊಂಡು ಕೂರೋದಕ್ಕಿಂತ, ಸಣ್ಣದಾಗಿ ನಿಮ್ಮದೇ ಆದ ಏನನ್ನಾದರೂ ಬಿಲ್ಡ್ ಮಾಡೋಕೆ ಶುರು ಮಾಡಬೇಕು. ಆ ಪ್ರಕ್ರಿಯೆಯಲ್ಲಿ ಬರೋ ಕಷ್ಟಗಳನ್ನ, ಎರರ್ ಗಳನ್ನ ಸಾಲ್ವ್ ಮಾಡೋದೇ ನಿಜವಾದ ಲರ್ನಿಂಗ್. ಇಲ್ಲಿ ನಾನು ನಿಮಗೆ ದಾರಿ ತೋರಿಸ್ತೀನಿ, ಶಾರ್ಟ್‌ಕಟ್ ಹೇಳಿಕೊಡ್ತೀನಿ, ಆದರೆ ಆ ದಾರಿಯಲ್ಲಿ ನಡೆಯಬೇಕಿರೋದು ಮಾತ್ರ ನೀವೇ.

ಕೆಲವೊಮ್ಮೆ ನಿಮಗೂ ಅನಿಸುತ್ತೆ ಅಲ್ವಾ, ಯಾಕಪ್ಪಾ ಈ ಎಲೆಕ್ಟ್ರಾನಿಕ್ಸ್, ಯಾಕೆ ಈ ಅಲ್ಗಾರಿದಮ್‌ಗಳು ನಮ್ಮ ತಲೆ ತಿನ್ನುತ್ತವೆ ಅಂತ? ಆದರೆ ಗಮನವಿಟ್ಟು ನೋಡಿ, ಜೀವನದಲ್ಲಿ ನೀವು ಮಾಡೋ ಪ್ರತಿಯೊಂದು ಚಟುವಟಿಕೆಯಲ್ಲೂ ಒಂದು ಅಲ್ಗಾರಿದಮ್ ಅಡಗಿರುತ್ತೆ. ಬೆಳಗ್ಗೆ ಎದ್ದು ಹಲ್ಲು ಉಜ್ಜೋದರಿಂದ ಹಿಡಿದು ರಾತ್ರಿ ಮಲಗೋವರೆಗೆ ನೀವು ಫಾಲೋ ಮಾಡೋ ಪ್ರತಿಯೊಂದು ಸ್ಟೆಪ್ಸ್ ಕೂಡ ಒಂದು ಪ್ರೋಗ್ರಾಮ್ ಇದ್ದಂತೆ. ಇಷ್ಟು ಸಿಂಪಲ್ ಆಗಿ ನಿಮ್ಮ ಲೈಫ್ ಅನ್ನು ಟೆಕ್ ಜೊತೆ ಕನೆಕ್ಟ್ ಮಾಡಿದ್ರೆ, ನಿಮಗೆ ಈ ಬೋರಿಂಗ್ ವಿಷಯಗಳು ಕೂಡ ತುಂಬಾನೇ ಇಂಟರೆಸ್ಟಿಂಗ್ ಆಗಿ ಕಾಣೋಕೆ ಶುರು ಆಗುತ್ತವೆ.

ಇಂದಿನಿಂದ ಈ ಲಾಸ್ಟ್‌ಬೆಂಚ್‌ನಲ್ಲಿ, ಈ ನಮ್ಮ ಮುಕ್ತ ಅಡ್ಡಾದಲ್ಲಿ ನಿಮಗೆ ಭವಿಷ್ಯಕ್ಕೆ ಬೇಕಿರೋ ಎಲ್ಲ ಟೆಕ್ ಅಸ್ತ್ರಗಳನ್ನ, ನಂಗೆ ಗೊತ್ತಿರೋ ಎಷ್ಟೋ ಬೇರ್ಬೇರೆ ಸಂಗತಿಗಳನ್ನ ನಾನು ಒಂದೊಂದಾಗಿ ಕೊಡ್ತಾ ಹೋಗ್ತೀನಿ. ಇಲ್ಲಿ ಸೀರಿಯಸ್ನೆಸ್ ಗಿಂತ ಹೆಚ್ಚಾಗಿ ಸಿಂಪ್ಲಿಸಿಟಿ ಇರುತ್ತೆ. ನಿಮ್ಮ ಜೊತೆ ಕೂತು ನಗುತ್ತಾ, ಜೋಕ್ ಮಾಡ್ತಾ ಲೈಪ್‌ ಮಂತ್ರಗಳನ್ನ ಹೇಳಿಕೊಡೋದೇ ನನ್ನ ಪ್ಲಾನ್. ಬರೀ ಟೆಕ್‌ ಮಾತ್ರಾನ ಅಂತ ಬ್ಯಾಗ್ ಹಾಕಿಕೊಂಡು ಎದ್ದು ಹೋಗ್ಬೇಡಿ. ನಿಮ್ಮ ಜೀವನಕ್ಕೆ, ಕೆರಿಯರ್ ಬಿಲ್ಡ್ ಮಾಡೋಕೆ ಬೇಕಾದ ಬೇರೆ ಬೇರೆ ರೋಚಕ ಸಂಗತಿಗಳನ್ನೂ ನಾನು ಇಲ್ಲಿ ಮಾತಾಡ್ತೀನಿ.

ಕೊನೆಯದಾಗಿ ಒಂದೇ ಮಾತು, ಈ ಫೀಲ್ಡ್‌ನಲ್ಲಿ ಗೆಲ್ಲೋದಕ್ಕೆ ದೊಡ್ಡ ಡಿಗ್ರಿ, ಚಿನ್ನದ ಪದಕಗಳೇ ಇರಬೇಕು ಅಂತೇನಿಲ್ಲ. ಕಲಿಯೋ ಹುಚ್ಚು ಮತ್ತು ಸಾಧಿಸಬೇಕು ಅನ್ನೋ ಛಲ ಇರಬೇಕು ಅಷ್ಟೇ. ಆ ಹುಚ್ಚನ್ನ ಬೆಳೆಸಿಕೊಳ್ಳೋ ಕೆಲಸ ಈ ಸರಣಿ ಮಾಡುತ್ತೆ. ಇಲ್ಲಿಂದ ಮುಂದೆ ನಾವು ನೋಡೋ ಪ್ರತಿ ವಿಷಯವೂ ನಿಮ್ಮ ಕೆರಿಯರ್‌ಗೆ ಒಂದೊಂದು ಇಟ್ಟಿಗೆಯಂತೆ ಕೆಲಸ ಮಾಡುತ್ತೆ. ಹಾಗಾಗಿ ಇವತ್ತಿನಿಂದ ನಿಮ್ಮ ಆ ಸರ್ ಸಂಸ್ಕೃತಿಗೆ ಬಾಯ್ ಬಾಯ್ ಹೇಳಿ, ಈ ಸೀನಿಯರ್ ಜೊತೆ ಸೇರಿ ಹೊಸ ಪ್ರಪಂಚವನ್ನ ಎಕ್ಸ್‌ಪ್ಲೋರ್ ಮಾಡೋಕೆ ಸಜ್ಜಾಗಿ.

ನಾಳೆ ಇದೇ ಸಮಯಕ್ಕೆ, ಇದೇ ಅಡ್ಡಾದಲ್ಲಿ ಸಿಗೋಣ. ಮಿಸ್ ಮಾಡಿಕೊಳ್ಳಬೇಡಿ. ನಿರಂತರ ಅಪ್ಡೇಟ್ ಪಡೆಯಲು ಮತ್ತು ಈ ಟೆಕ್ ಜರ್ನಿಯಲ್ಲಿ ನಮ್ಮೊಂದಿಗೆ ಹೆಜ್ಜೆ ಹಾಕಲು ಕೆಳಗಿನ ಲಿಂಕ್ ಬಳಸಿ ನಮ್ಮ ವಾಟ್ಸಾಪ್ ಗ್ರೂಪ್ ಗೆ ಸೇರಿಕೊಳ್ಳಿ.

ಹಾಗಿದ್ದರೆ ನಮ್ಮ ಈ ಟೆಕ್ ಜರ್ನಿಯಲ್ಲಿ ನೀವು ಕೂಡ ಜೊತೆಯಾಗಲು ರೆಡಿ ಇದ್ದೀರಾ? ಜಾಯಿನ್ ಆಗಲು ಈ ಲಿಂಕ್ ಕ್ಲಿಕ್ ಮಾಡಿ: 

🟢 ನಿರಂತರ ಅಪ್ಡೇಟ್‌ ಪಡೆಯಲು ನಮ್ಮ ವಾಟ್ಸಾಪ್‌ ಚಾನೆಲ್‌ ಫಾಲೋ ಮಾಡಿ JOIN ➤ 

ಈ ಲೇಖನಗಳನ್ನೂ ಓದಿ 

❤️ ಮಾಯಾಮೋಕ್ಷ - ಸಂಚಿಕೆ 12

❤️ ಕನ್ನಡದಲ್ಲಿ ಉತ್ತರಿಸುವ ಕೋಪೈಲಟ್: ಮೈಕ್ರೋಸಾಫ್ಟ್ ಹೊಸ ಮ್ಯಾಜಿಕ್!

❤️ ಎಐ ಕಾಪಿರೈಟ್ 2026: ಸೃಜನಶೀಲತೆಯ ಮ...

❤️ ಯಾವುದೇ ಆಪ್‌ ಇಲ್ಲದೇ ಡಿಲೀಟ್ ಆದ ಮೆಸೇಜ್ ಓದೋದು ಹೇಗೆ?

❤️ ಓಲಾ vs ಏಥರ್: ಕನ್ನಡಿಗರಿಗೆ ಯಾವುದು ಬೆಸ್ಟ್? ರೇಂಜ್, ಬೆಲೆ ಮತ್ತು ಸರ್ವಿಸ್‌ಗಳ ಕಂಪ್ಲೀಟ್ ರಿಯಾಲಿಟಿ ಚೆಕ್ !

🟢 ನಿರಂತರ ಅಪ್ಡೇಟ್‌ ಪಡೆಯಲು ನಮ್ಮ ವಾಟ್ಸಾಪ್‌ ಚಾನೆಲ್‌ ಫಾಲೋ ಮಾಡಿ JOIN ➤ 

🛒 ಆನ್‌ಲೈನ್‌ ಶಾಪಿಂಗ್

🟠 ಅಮೆಜಾನ್‌ನಿಂದ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

🔵 ಫ್ಲಿಪ್‌ಕಾರ್ಟ್‌ನಿಂದ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

Nagaraj Vaidya
Nagaraj Vaidya is the Editor-in-Chief of Tech Vaidya Global and a technology analyst with 18 years of journalism experience. He covers AI, Agritech, Cybersecurity, and Digital Trends, helping readers understand the technologies shaping the future. He is the author of AI Bhagavad Gita.
600 Views
ಶೇರ್ ಮಾಡಿ

1 ಕಾಮೆಂಟ್‌ಗಳು

Dattatri HM

Curious to read! All the best for this new series!

ಕಾಮೆಂಟ್ ಮಾಡಿ

ಚಂದಾದಾರರಾಗಿ

ಬ್ರೇಕಿಂಗ್‌ ನ್ಯೂಸ್, ಟ್ರೆಂಡಿಂಗ್ ಸ್ಟೋರಿ ಆಳವಾದ ವಿಶ್ಲೇಷಣೆಗಳನ್ನು ನಿರಂತರವಾಗಿ ಪಡೆಯಲು ಉಚಿತವಾಗಿ ಚಂದಾದಾರರಾಗಿ.

Follow Us
ಜಾಹೀರಾತು

ಸಂಬಂಧಿತ ಸುದ್ದಿ

🔥
📱 WhatsApp 🐦 X 🖼️ Status
Join Now
Promoted

🌐 ವೆಬ್‌ಸೈಟ್ 💬 WhatsApp