ಟ್ರೆಂಡಿಂಗ್
AI vs ಮನುಷ್ಯನ ಮೆದುಳು: ಕೃತಕ ಬುದ್ಧಿಮತ್ತೆ ಬಗ್ಗೆ ಮಹಾನ್ ಸಾಧಕರು ಏನನ್ನುತ್ತಿದ್ದರು?
ನಾವೆಲ್ಲಾ ಪುಟ್ಟ ಪುಟ್ಟ ಕಂಪ್ಯೂಟರ್‌ಗಳು. ಹಾಗೆ ನೋಡಿದರೆ, ನಾವು ಬಳಸುವ ಕಂಪ್ಯೂಟರ್‌ಗಳಿಗಿಂತ ಹೆಚ್ಚು ಶಕ್ತಿ ನಮ್ಮ ಬ್ರೇನ್‌ಗಿದೆ ಎನ್ನುವುದನ್ನೇ ನಂಬಿ ಬೆಳೆದವರು. ಆದರೂ, ಅದನ್ನು ಸಂಪೂರ್ಣ ಉಪಯೋಗಿಸುವುದು ನಮಗೆ ಸಾಧ್ಯವಾದರೆ ಮಾತ್ರ ಕಂಪ್ಯೂಟರನ್ನು ಮೀರಿಸಿದ ಲೆಕ್ಕಾಚಾರಗಳನ್ನು ನಾವು ಮಾಡಬಲ್ಲೆವು ಅನ್ನುವುದು ಕೂಡ ನಮಗಿದ್ದ ಯೋಚನೆ.
ಆದರೆ, ಸಾಮಾನ್ಯರನ್ನೂ ಮೀರಿದ ಕೆಲವೊಂದು ಮೆದುಳುಗಳು ಅಸಾಮಾನ್ಯವಾದ ಲೆಕ್ಕಾಚಾರಗಳನ್ನು ಮಾಡುವುದನ್ನು ನೋಡಿದ್ದೇವೆ, ಅವರನ್ನು ಹ್ಯೂಮನ್ ಕಂಪ್ಯೂಟರ್‌ಗಳು ಅಂತಲೂ ಕರೆದಿದ್ದೇವೆ. ನಮ್ಮ ದೇಶದ, ನಮ್ಮ ಕರ್ನಾಟಕದವರೇ ಆಗಿದ್ದ ಶಕುಂತಲಾ ದೇವಿ ಅವರನ್ನು ನೋಡಿ ದಿಗ್ಭ್ರಮಿಸಿದ ನಾವು, ಸ್ಟೀಫನ್ ಹಾಕಿಂಗ್‌ನಂತಹ ಅಸಾಮಾನ್ಯ ಬ್ರೇನ್ ಹೊಂದಿರುವ ವ್ಯಕ್ತಿಯ ಯೋಚನೆಗಳಿಗೂ ತಲೆಬಾಗಿದ್ದೇವೆ. ವಿಶ್ವೇಶ್ವರಯ್ಯ ಅವರ ಮೆದುಳನ್ನು ಮರು ಸೃಷ್ಟಿ ಮಾಡಲು ಸಾಧ್ಯವಾ ಅನ್ನುವ ಯೋಚನೆಗಳನ್ನು ಮಾಡಿದ್ದೂ ಇದೆ. ಐನ್‌ಸ್ಟೈನ್ ಅವರ ಯೋಚನೆಯ ವೇಗವನ್ನೂ ಮೆಚ್ಚಿ ಕೊಂಡಾಡಿದ್ದೇವೆ.
ಆದರೀಗ, ಏಐ ಬಂದಿದೆ. ಈ ಕಾಲದಲ್ಲಿ, ಈ ಕ್ಷಣದಲ್ಲಿ ಮಾನವ ಕಂಪ್ಯೂಟರ್‌ಗಳು ಇದ್ದಿದ್ದರೆ ಏನಂದುಕೊಳ್ಳುತ್ತಿದ್ದರು, ಏನನ್ನುತ್ತಿದ್ದರು ಅನ್ನುವ ಯೋಚನೆ ನಿಮಗ್ಯಾವತ್ತಾದರೂ ಮೂಡಿದೆಯಾ?
ನಾವೀಗ ಅದೇ ರೀತಿಯ ಒಂದು ಊಹೆಯ ಜಗತ್ತಿಗೆ ತೆರಳೋಣ. ಇಲ್ಲಿ ಈ ಮುಂದಿನ ಮಹಾನ್ ಮೆದುಳುಗುಳುಳ್ಳ ಸಾಧಕರು ಏಐ ಬಗ್ಗೆ ಏನನ್ನುತ್ತಿದ್ದರು ಎನ್ನುವುದನ್ನು ನೋಡೋಣ!
ಶಕುಂತಲಾ ದೇವಿ, ಖ್ಯಾತ ಗಣಿತಜ್ಞೆ
“ಈ ಯಂತ್ರ ನನಗಿಂತ ವೇಗವಾದ್ದು, ಸರಿ. ಆದರೆ, ಒಂದು ವಿಷಯ ಹೇಳಿ ನಂಗೆ, ಇದಕ್ಕೆ ಸರಿಯಾದ ಉತ್ತರ ಸಿಕ್ಕಾಗ ಅದು ಒಂದು ನಸು ನಗು ನೀಡುತ್ತಾ?”
ಸರ್ ಎಂ ವಿಶ್ವೇಶ್ವರಯ್ಯ, ಮಹಾನ್ ಎಂಜಿನಿಯರ್, ಮೇಧಾವಿ
“ನಿಮಗಾಗಿ ಯೋಚಿಸುವ ಯಂತ್ರ ಉಪಯುಕ್ತ. ನಿಮ್ಮ ಬದಲು, ಅದರ ಬಳಿ ಯೋಚನೆಗೆ ಅವಕಾಶ ನೀಡುವ ದೇಶ, ಅದರ ಕೊನೆ ಕಂಡಂತೆ. ಮಷಿನ್ ಅನ್ನು ಇಂಡಸ್ಟ್ರಿಯಲೈಸ್ ಮಾಡಿ, ಆದರೆ, ಮೆದುಳನ್ನು ಮಾತ್ರ ಮಾಡಬೇಡಿ!”
ಆಲ್ಬರ್ಟ್ ಐನ್‌ಸ್ಟೈನ್, ಮಹಾನ್ ವಿಜ್ಞಾನಿ
“ಮಷಿನ್ ಎಲ್ಲವನ್ನೂ ಓದಿದೆ, ಆದರೆ, ಯಾವುದನ್ನೂ ಅರ್ಥೈಸಿಕೊಂಡಿಲ್ಲ. ಜ್ಞಾನ ಒಂದು ಬಾಟಲಿಯಂತೆ, ಆದರೆ ಕಲ್ಪನೆ ನೀವು ಅದರೊಂದಿಗೆ ಏನು ಮಾಡುತ್ತೀರಿ ಅನ್ನೋದು. ಈ ಯಂತ್ರದ ಜೊತೆ ಬಾಟಲಿಯಿದೆ, ಆದರೆ ನಿಮ್ಮ ಕಲ್ಪನೆಯನ್ನು ಕಾಪಿಟ್ಟುಕೊಳ್ಳಿ”
ಸ್ಟೀಫನ್ ಹಾಕಿಂಗ್, ಭೌತಶಾಸ್ತ್ರಜ್ಞ
“ಈ ಯಂತ್ರ ನನ್ನ ಕಳೆದು ಹೋದ ಧ್ವನಿಯನ್ನು ನನಗೆ ನೀಡಿದೆ. ನಾನು ಕೃತಜ್ಞ, ಹೌದು. ಆದರೆ ನನಗೆ ಭಯವೂ ಇದೆ. ಇತಿಹಾಸದಲ್ಲೇ ಅತಿ ಭಯಾನಕ ಸಾಲು ಎನ್ನಬಹುದು ಅಂದರೆ, ಅದನ್ನು ಏಐ ನೋಡಿಕೊಳ್ಳುತ್ತದೆ, ಅನ್ನೋದು.”
ಇದು ಕಲ್ಪನೆಯ ಮಾತುಗಳೇ ಅಂದರೂ, ಇವು ಕಲ್ಪನೆ ಮಾತ್ರವಲ್ಲ,, ನಿಜರೂಪ ದರ್ಶನ. ಇವತ್ತು ಟೆಕ್ನಾಲಜಿ ನಮಗೆಲ್ಲ ವರವೂ ಹೌದು, ಅದು ಶಾಪವೂ ಹೌದು. ವರ ನಮಗೆ ಬೇಗ ಕಣ್ಣಿಗೆ, ಅನುಭವಕ್ಕೆ ಸಿಕ್ಕೀತು, ಆದರೆ, ಅದರ ಹಿಂದಿನ ಶಾಪ ಏನು ಎನ್ನುವುದನ್ನು ತಿಳಿದು ನಾವು ಎಚ್ಚೆತ್ತುಕೊಳ್ಳುವಾಗ ತಡವಾಗಬಾರದು. ಯಾಕೆಂದರೆ, ಮುಂದುವರೆಯುವ ವೇಗದಲ್ಲಿ, ಮತ್ತೆ ಹಿಂದಿನದನ್ನು ಪಡೆಯುವ ದಾರಿ ಮರೆತೇವು, ಹುಡುಕುವುದಕ್ಕೆ ಹೊರಟರೂ, ಅದನ್ನು ಕಂಡು, ಅದರಲ್ಲಿ ಸಾಗುವುದು ಕಷ್ಟ.
ಈಗಾಗಲೇ ನಮಗೆ ಪುಟ್ಟ ಪುಟ್ಟ ಲೆಕ್ಕಾಚಾರಗಳನ್ನು ಹಾಕುವುದಕ್ಕೂ ಮೊಬೈಲ್ ಬೇಕಾಗುತ್ತಿದೆ. ದಶಕಗಳ ಹಿಂದೆ ತಲೆಯೊಳಗೇ ನೆನಪಿದ್ದ ನಂಬರ್‌ಗಳು ಈಗ ನೆನಪೇ ಉಳಿಯುವುದಿಲ್ಲ. ಮಾನವನ ವಿಶೇಷತೆಯೇ ಅವನ ಮೆದುಳು. ಅದು ಹೇಗೆ ಲೆಕ್ಕ ಹಾಕುತ್ತದೆ, ವಿಷಯಗಳನ್ನು ಹೆಕ್ಕಿ ತೆಗೆಯುತ್ತದೆ, ಅವುಗಳಿಗೆ ಭಾವನೆಗಳನ್ನು ತಾಳೆ ಹಾಕುತ್ತದೆ ಎನ್ನುವುದೇ ಅವನನ್ನು ಅವನಾಗಿಸುತ್ತದೆ.
ಆದರೆ, ಈ ಏಐ ಬಂದ ಮೇಲಂತೂ ನಮ್ಮ ತಂತ್ರಜ್ಞಾನದ ಮೇಲಿನ ಅವಲಂಬನೆ ಮಿತಿ ಮೀರಿ ಸಾಗುತ್ತಿದೆ. ಹಳ್ಳಿಯೊಳಗೊಬ್ಬ ರೈತ, ವಾತಾವರಣವನ್ನು ನೋಡಿಯೇ ಮಳೆ, ಬೆಳೆಯ ತಾಳೆ ಹಾಕುತ್ತಿದ್ದ, ಅವನಿಗೆ ತಂತ್ರಜ್ಞಾನ ಏನೋ ಸಹಾಯ ಮಾಡುತ್ತಿದೆ. ಆದರೆ ಅವನು ಅದಕ್ಕೇ ಅವಲಂಬಿತನಾಗಿ ಬದುಕಲು ಕಲಿತರೆ, ಒಂದೆರಡು ದಿನ ಕರೆಂಟ್ ಇಲ್ಲದೆಯೋ, ಅಥವಾ ಅವನೂರಿನಲ್ಲಿ ಇಂಟರ್ನೆಟ್ ಇಲ್ಲದೆಯೋ ಹೋದರೆ, ಅವನ ಕೆಲಸವೇ ಏರುಪೇರಾದೀತು.
ಇದು ಸಿಟಿಯಲ್ಲಿ ಕೆಲಸ ಮಾಡುವವರಿಗೂ ಅನ್ವಯವಾಗುತ್ತದೆ. ಒಂದೇ ಒಂದು ಕ್ಷಣ ಇಂಟರ್ನೆಟ್ ಇಲ್ಲದೇ ಬದುಕುವುದು ಅಸಾಧ್ಯವೆನಿಸುವ ಕಾಲ ಬಂದೇ ಬಿಟ್ಟಿದೆ. ಹೀಗಿರುವಾಗ ಮುಂದೊಂದು ದಿನ, ಯಾವುದೋ ದೊಡ್ಡ ಸರ್ವರ್ ಡೌನ್ ಆಗುವುದರ ಮೂಲಕ ಗಂಟೆಗಟ್ಟಲೆ, ದಿನಗಟ್ಟಲೆ ವ್ಯವಸ್ಥೆಗಳು ವ್ಯತ್ಯಯವಾದರೆ, ಎಲ್ಲವೂ ಅಯೋಮಯವಾಗುವುದು ಖಂಡಿತಾ!
ಹಾಗಾಗಿ, ಎಲ್ಲವನ್ನೂ ಮಿತಿಯಲ್ಲಿ ಬಳಸುವ ಬುದ್ಧಿ ನಮಗೆಲ್ಲಾ ಬರಲಿ, ನಮ್ಮ ಪುಟ್ಟ ಮೆದುಳಿನ ನಿಜ ಉಪಯೋಗ ಕಡಿಮೆ ಮಾಡುವುದನ್ನು ನಿಲ್ಲಿಸೋಣ ಅನ್ನೋದು ತಪ್ಪೇ?
*
ವಿಚಿತ್ರ ಎಂದರೆ, ಅಸಾಮಾನ್ಯ ಲೆಕ್ಕಾಚಾರಗಳನ್ನು ಮಾಡುವ ವ್ಯಕ್ತಿಗಳನ್ನು ಕಂಪ್ಯೂಟರ್‌ಗಳಿಗೆ ಹೋಲಿಸುವುದು ಒಂದೆಡೆಯಾದರೆ, ಈಗೀಗ, ಏಐ ಯೋಚನೆ ಮಾಡೋದನ್ನು ನೋಡಿ ಇದು ಮನುಷ್ಯರ ರೀತಿಯೇ ವರ್ತಿಸುತ್ತಿದೆ ಎಂದು ಅಚ್ಚರಿಪಡುತ್ತಿದ್ದೇವೆ!
ಟೆಕ್-ವಚನ
ದನಿ ಕೊಟ್ಟ ಕೈಯೇ ಕೊರಳ ಹಿಸುಕೀತೆಂಬ ಭಯ
ಉಪಕಾರಿಗೂ ಎಚ್ಚರ ಬೇಕು ಎಂದ ಜ್ಞಾನಿ | ಜಗದೊಳು
ಟೆಕ್ಕು ಹೊಕ್ಕಿಲ್ಲದ ಲೋಕವಿಲ್ಲ ತಂತ್ರಜ್ಞ ||
❤️ ಈ ಲೇಖನಗಳನ್ನೂ ಓದಿ
❤️ಬರಿ ನೈಟ್ ಲೈಟ್ ಅಲ್ಲ, ಇದು ಕಣ್ಣುಗಳಿಗೆ ಡಿಜಿಟಲ್ ಕವಚ: ವಿಂಡೋಸ್ 11 ನಲ್ಲಿ ಬರಲಿದೆ ಮ್ಯಾಜಿಕ್ ಕಲರ್ಸ್!
❤️WhatsApp ಅಕೌಂಟ್ ಹ್ಯಾಕ್ ತಡೆ: ಸೋಷಿಯಲ್ ಇಂಜಿನಿಯರಿಂಗ್ ಸ್ಕ್ಯಾಮ್‌ನಿಂದ ಬಚಾವ್ ಆಗಿ!
❤️ಕ್ಯಾಸಿನೊಗಳ ಇತಿಹಾಸವೇ ಬದಲಾಯ್ತು: ಅಮೆರಿಕದಲ್ಲಿ ಸಿಕ್ಕ ಪ್ರಾಚೀನ ದಾಳಗಳು ಹೇಳುವ ಕಥೆಯೇನು?
❤️ಐಡಿಇ (IDE): ಇದು ಕೋಡರ್‌ಗಳ ಪ್ಲೇಗ್ರೌಂಡ್ (VS Code)
❤️ಪ್ರೋಗ್ರಾಮೆಬಲ್ ಮೆಡಿಸಿನ್: ಸಾಫ್ಟ್‌ವೇರ್‌ನಂತೆ ಮೆದುಳಿನ ಒಳಗೆ ಕೆಲಸ ಮಾಡಲಿದೆ ಈ ಡಿಎನ್‌ಎ ಡ್ರಗ್!
❤️ನಿಮ್ಮ ಇಂಟರ್ನೆಟ್ ವೇಗ ಹೆಚ್ಚಿಸಬೇಕೇ? ಈ 7 ಗುಪ್ತ ಮಾರ್ಗಗಳನ್ನು ಪ್ರಯತ್ನಿಸಿ!
❤️ಅಲ್ಝೈಮರ್ಸ್ ಮರೆವಿನ ಕಾಯಿಲೆಗೆ ಸಿಕ್ಕೇಬಿಡ್ತಾ ಮದ್ದು?
❤️ವೈರ್‌ಲೆಸ್ ಅಬ್ಬರದಲ್ಲೂ ಆಪಲ್ ಇಯರ್‌ಪಾಡ್ಸ್ ನನ್ನ ಫೇವರಿಟ್ ಯಾಕೆ?
🟢 ನಿರಂತರ ಅಪ್ಡೇಟ್ ಪಡೆಯಲು ನಮ್ಮ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ JOIN ➤
🛒 ಆನ್‌ಲೈನ್ ಶಾಪಿಂಗ್ ಮಾಡುವಾಗ ಈ ಕೆಳಗಿನ ಲಿಂಕ್ ಬಳಸಿ
0 ಕಾಮೆಂಟ್‌ಗಳು
ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ.
ಕಾಮೆಂಟ್ ಮಾಡಿ
ಚಂದಾದಾರರಾಗಿ
ಬ್ರೇಕಿಂಗ್ ನ್ಯೂಸ್, ಟ್ರೆಂಡಿಂಗ್ ಸ್ಟೋರಿ ಆಳವಾದ ವಿಶ್ಲೇಷಣೆಗಳನ್ನು ನಿರಂತರವಾಗಿ ಪಡೆಯಲು ಉಚಿತವಾಗಿ ಚಂದಾದಾರರಾಗಿ.