ಇಂಜಿನಿಯರಿಂಗ್ ಮ್ಯಾಥ್ಸ್ ಫೇಲ್ ಆಗಿದ್ದೀರಾ? ಡೋಂಟ್ವರಿ ಮಾಡ್ಕೋಬೇಡಿ ನೀವಾಗ್ಬೋದು ಬೆಸ್ಟ್ ಕೋಡರ್!
ಎಂ1 ಅಥವಾ ಎಂ2 ರಿಸಲ್ಟ್ ಬಂದ ದಿನ ನಿನ್ನ ಮುಖ ಹೇಗಿತ್ತು ಅಂತ ನನಗೆ ಚೆನ್ನಾಗಿ ಗೊತ್ತು. ಕಾಲೇಜಿನ ನೋಟಿಸ್ ಬೋರ್ಡ್ ಮುಂದೆ ಅಥವಾ ಮೊಬೈಲ್ ಸ್ಕ್ರೀನ್ ಮೇಲೆ ನಿನ್ನ ಯುಎಸ್ಎನ್ ಎದುರು ಆ ಕೆಂಪು ಬಣ್ಣದ 'ಎಫ್' ಕಂಡಾಗ ಇಡೀ ಜಗತ್ತೇ ಮುಳುಗಿ ಹೋದ ಹಾಗೆ ಅನ್ನಿಸಿರುತ್ತೆ ಅಲ್ವಾ? ಮನೆಯಲ್ಲಿ ಅಪ್ಪನ ಬೈಗುಳ, ಪಕ್ಕದ ಮನೆಯ ಆಂಟಿಯರ ವಿಚಾರಣೆ, ಇದೆಲ್ಲದರ ಮಧ್ಯೆ ನನಗೇನು ಬರಲ್ಲ, ನಾನು ಇಂಜಿನಿಯರಿಂಗ್ಗೆ ನಾಲಾಯಕ್ಕು ಅಂತ ನೀನು ಡಿಸೈಡ್ ಮಾಡ್ಬಿಟ್ಟಿರ್ತೀಯಾ. ಆದರೆ ಒಬ್ಬ ಫ್ರೆಂಡ್ಲಿ ಸೀನಿಯರ್ ಆಗಿ ನಾನು ನಿನಗೆ ಹೇಳ್ತಿರೋ ಮಾತು ಕೇಳು, ಆ ಒಂದು ಸಬ್ಜೆಕ್ಟ್ ಫೇಲ್ ಆಗಿದ್ದಕ್ಕೆ ನೀನು ನಿನ್ನ ಕೆರಿಯರ್ ಮುಗೀತು ಅಂತ ಅನ್ಕೋಬೇಡ. ನಿಜ ಹೇಳ್ಬೇಕಂದ್ರೆ, ಯಾರು ಮ್ಯಾಥ್ಸ್ನಲ್ಲಿ ಒದ್ದಾಡ್ತಾರೋ ಅವರು ಅದ್ಭುತವಾದ ಕೋಡರ್ ಆಗೋ ಸಾಧ್ಯತೆ ತುಂಬಾ ಇರುತ್ತೆ.
ನಮ್ಮಲ್ಲಿ ಒಂದು ದೊಡ್ಡ ತಪ್ಪು ತಿಳುವಳಿಕೆ ಇದೆ, ಅದೇನೆಂದರೆ ಯಾರು ಮ್ಯಾಥ್ಸ್ನಲ್ಲಿ ಕಿಂಗ್ ಇರ್ತಾರೋ ಅವರು ಮಾತ್ರ ಕೋಡಿಂಗ್ನಲ್ಲಿ ಬೆಂಕಿ ಹಚ್ಚೋಕೆ ಸಾಧ್ಯ ಅಂತ. ಇದು ಶುದ್ಧ ಸುಳ್ಳು ಮಗಾ. ಕೋಡಿಂಗ್ ಮಾಡೋಕೆ ನಿನಗೆ ಬೇಕಿರೋದು ಲಾಜಿಕ್ ಹೊರತು ದೊಡ್ಡ ದೊಡ್ಡ ಇಂಟಿಗ್ರೇಷನ್ ಅಥವಾ ಡಿಫರೆನ್ಸಿಯೇಷನ್ ಫಾರ್ಮುಲಾಗಳಲ್ಲ. ನೀನು ದಿನನಿತ್ಯದ ಜೀವನದಲ್ಲಿ ಅದೆಷ್ಟು ಲಾಜಿಕ್ ಉಪಯೋಗಿಸ್ತೀಯಾ ಅಲ್ವಾ? ಈಗ ಕ್ಯಾಂಟೀನ್ನಲ್ಲಿ ಸಾಲ ಕೊಡೋಕೆ ಬರಲ್ಲ ಅಂದಾಗ ಅವನ ಹತ್ತಿರ ಹೇಗೆ ಮಾತಾಡಿ ಮ್ಯಾನೇಜ್ ಮಾಡಬೇಕು ಅನ್ನೋದು ಕೂಡ ಒಂದು ಲಾಜಿಕ್. ಅದೇ ರೀತಿ ಕಂಪ್ಯೂಟರ್ಗೆ ನೀನು ಏನು ಮಾಡಬೇಕು ಅಂತ ಸರಳವಾಗಿ ಹೇಳೋದೇ ಕೋಡಿಂಗ್. ಇಲ್ಲಿ ಮ್ಯಾಥ್ಸ್ ಅನ್ನೋದು ಒಂದು ಸಣ್ಣ ಭಾಗವಷ್ಟೇ ಹೊರತು ಅದೇ ಸರ್ವಸ್ವ ಅಲ್ಲ.
ಈ ಎಂ1, ಎಂ2 ಸಬ್ಜೆಕ್ಟ್ಗಳಲ್ಲಿ ಇರೋ ಆ ಸಂಕೀರ್ಣವಾದ ಲೆಕ್ಕಗಳು ನಿನಗೆ ಯಾಕೆ ಅರ್ಥ ಆಗಲ್ಲ ಅಂದ್ರೆ, ಅದನ್ನ ನಾವು ಎಲ್ಲಿ ಬಳಸ್ತೀವಿ ಅನ್ನೋದೇ ನಮಗೆ ಗೊತ್ತಿರಲ್ಲ. ಸುಮ್ಮನೆ ಯಾವುದೋ ಫಾರ್ಮುಲಾ ಹಾಕಿ ಎಕ್ಸ್ ಮತ್ತು ವೈ ವ್ಯಾಲ್ಯೂ ಹುಡುಕೋದ್ರಲ್ಲಿ ಯಾರಿಗಾದರೂ ಬೋರ್ ಆಗೋದು ಸಹಜ. ಆದರೆ ಕೋಡಿಂಗ್ ಹಾಗಿಲ್ಲ, ನೀನು ಒಂದು ಲೈನ್ ಕೋಡ್ ಬರೆದರೆ ಅದಕ್ಕೊಂದು ಔಟ್ಪುಟ್ ಇರುತ್ತೆ. ಆ ಸ್ಕ್ರೀನ್ ಮೇಲೆ ನಿನ್ನ ಕೆಲಸ ಕಾಣಿಸಿದಾಗ ಸಿಗೋ ಖುಷಿಯೇ ಬೇರೆ. ಹಾಗಾಗಿ ಮ್ಯಾಥ್ಸ್ ಫೇಲ್ ಆಯ್ತು ಅಂದ ತಕ್ಷಣ ನಿನ್ನಲ್ಲಿರೋ ತರ್ಕ ಶಕ್ತಿ ಕಡಿಮೆ ಇದೆ ಅಂತ ಅರ್ಥ ಅಲ್ಲ. ನೀನು ವಿಷಯವನ್ನು ಬೇರೆ ಆಂಗಲ್ನಲ್ಲಿ ಯೋಚನೆ ಮಾಡ್ತಿದ್ದೀಯಾ ಅಷ್ಟೇ.
🟢 ನಿರಂತರ ಅಪ್ಡೇಟ್ ಪಡೆಯಲು ನಮ್ಮ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ JOIN ➤
ವಾಸ್ತವದಲ್ಲಿ ನೀನು ಸಾಫ್ಟ್ವೇರ್ ಇಂಡಸ್ಟ್ರಿಗೆ ಹೋದಾಗ ಅಲ್ಲಿ ನಿನಗೆ ಡಿಫರೆನ್ಸಿಯೇಷನ್ ಮಾಡಿ ಅಂತ ಯಾರೂ ಕೇಳಲ್ಲ. ಅಲ್ಲಿ ನಿನಗೆ ಬೇಕಿರೋದು ಬರಿ ಕೂಡಿಸೋದು, ಕಳೆಯೋದು, ಗುಣಿಸೋದು ಮತ್ತು ಭಾಗಿಸೋದು. ಇದನ್ನೇ ನಾವು ಅರ್ಥ್ ಮೆಟಿಕ್ ಲಾಜಿಕ್ ಅಂತ ಕರೀತೀವಿ. ಪ್ರೋಗ್ರಾಮಿಂಗ್ ಭಾಷೆಗಳಾದ ಪೈಥಾನ್ ಅಥವಾ ಜಾವಾಸ್ಕ್ರಿಪ್ಟ್ನಲ್ಲಿ ಇವೆಲ್ಲವನ್ನೂ ಮಾಡೋಕೆ ಇನ್-ಬಿಲ್ಟ್ ಫಂಕ್ಷನ್ ಇರುತ್ತವೆ. ನೀನು ಬರಿ ಒಂದು ಕೀ ವರ್ಡ್ ಟೈಪ್ ಮಾಡಿದರೆ ಸಾಕು, ನಿನ್ನ ಕೆಲಸ ಮುಗಿಯುತ್ತೆ. ಹಾಗಾಗಿ ನಿನಗೆ ಮ್ಯಾಥ್ಸ್ ಬರಲ್ಲ ಅನ್ನೋದು ನಿನ್ನ ದೌರ್ಬಲ್ಯ ಅಲ್ಲ, ಅದು ನಿನ್ನ ಕೋಡಿಂಗ್ ಶಕ್ತಿಯನ್ನು ಹೆಚ್ಚಿಸೋ ಒಂದು ಅವಕಾಶ ಅಂತ ಅನ್ಕೋ.
ನಿಂಗೆ ಗೊತ್ತಾ, ಜಗತ್ತಿನ ಅದೆಷ್ಟೋ ಫೇಮಸ್ ಕೋಡರ್ ಗಳು ಕಾಲೇಜಿನಲ್ಲಿ ಬ್ಯಾಕ್ ಲಾಗ್ ಇಟ್ಟುಕೊಂಡವರೇ. ಅವರು ಫೇಲ್ ಆಗಿದ್ದಕ್ಕೆ ಒಂದು ಕಾರಣವಿರುತ್ತೆ, ಅವರೆಲ್ಲ ವಿಷಯವನ್ನು ಪ್ರಾಕ್ಟಿಕಲ್ ಆಗಿ ನೋಡೋಕೆ ಇಷ್ಟ ಪಡ್ತಾರೆ. ಯಾವಾಗ ವಿಷಯ ಬರಿ ಥಿಯರಿ ಆಗುತ್ತೋ ಅವಾಗ ಅವರಿಗೆ ಅದು ಕಿರಿಕಿರಿ ಉಂಟು ಮಾಡುತ್ತೆ. ನೀನು ಕೂಡ ಅದೇ ಗುಂಪಿಗೆ ಸೇರಿದವನಿರಬಹುದು. ಬ್ಯಾಕ್ ಲಾಗ್ ಬಿದ್ದ ತಕ್ಷಣ ನಿನ್ನ ಕಾನ್ಫಿಡೆನ್ಸ್ ಕಳೆದುಕೊಳ್ಳಬೇಡಿ. ಆ ಫೇಲ್ಯೂರ್ ನಿನಗೆ ಒಂದಲ್ಲ ಒಂದು ದಿನ 'ಟ್ರಬಲ್ ಶೂಟಿಂಗ್' ಕೌಶಲ್ಯವನ್ನು ಕಲಿಸುತ್ತೆ. ಅಂದ್ರೆ ಒಂದು ತಪ್ಪು ಆದಾಗ ಅದನ್ನ ಹೇಗೆ ಸರಿ ಮಾಡಬೇಕು ಅಂತ ನೀನು ಈಗಲೇ ಕಲಿತಂಗೆ ಆಗುತ್ತೆ.
ಡಿಗ್ರಿ ಮಾರ್ಕ್ಸ್ ಕಾರ್ಡ್ ಅನ್ನೋದು ಬರಿ ಒಂದು ಕಾಗದದ ತುಂಡು ಮಗಾ. ಕೆಲಸ ಸಿಗೋಕೆ ಅದು ಬರಿ ಒಂದು ಎಂಟ್ರಿ ಪಾಸ್ ಇದ್ದಂತೆ. ಆದರೆ ಒಳಗೆ ಹೋದ ಮೇಲೆ ನಿನ್ನನ್ನು ಉಳಿಸಿಕೊಳ್ಳೋದು ನಿನ್ನ ಸ್ಕಿಲ್ ಮಾತ್ರ. ಇವತ್ತು ಗೂಗಲ್ ಅಥವಾ ಅಮೆಜಾನ್ ನಂತಹ ಕಂಪನಿಗಳು ಕೂಡ ನಿನ್ನ ಬ್ಯಾಕ್ ಲಾಗ್ ಎಷ್ಟಿದೆ ಅಂತ ಕೇಳಲ್ಲ, ಬದಲಾಗಿ ನೀನು ಯಾವ ರೀತಿ ಪ್ರಾಬ್ಲಮ್ ಸಾಲ್ವ್ ಮಾಡ್ತೀಯಾ ಅಂತ ನೋಡ್ತಾವೆ. ನೀನು ಒಳ್ಳೆ ಪ್ರಾಜೆಕ್ಟ್ ಗಳನ್ನು ಬಿಲ್ಡ್ ಮಾಡಿದರೆ, ಗಿಟ್ ಹಬ್ ನಲ್ಲಿ ನಿನ್ನ ಕಾಂಟ್ರಿಬ್ಯೂಷನ್ ಚೆನ್ನಾಗಿದ್ದರೆ ಯಾರೂ ನಿನ್ನ ಎಂ೧ ಮಾರ್ಕ್ಸ್ ನೋಡೋಕೆ ಬರಲ್ಲ.
ಒಂದು ಸಲ ಯೋಚನೆ ಮಾಡು, ಮ್ಯಾಥ್ಸ್ ನಲ್ಲಿ 100 ಕ್ಕೆ 100 ತೆಗೆದವರೆಲ್ಲ ಒಳ್ಳೆ ಕೋಡರ್ ಆಗಿದ್ದಾರಾ? ಖಂಡಿತ ಇಲ್ಲ. ಕೋಡಿಂಗ್ ಅನ್ನೋದು ಒಂದು ಕ್ರಿಯೇಟಿವಿಟಿ. ಇದು ಪೇಂಟಿಂಗ್ ಅಥವಾ ಮ್ಯೂಸಿಕ್ ಇದ್ದ ಹಾಗೆ. ಇಲ್ಲಿ ನಿನ್ನ ಕಲ್ಪನಾ ಶಕ್ತಿ ಮುಖ್ಯ.
ಒಂದು ಅಪ್ಲಿಕೇಶನ್ ಹೇಗೆ ಕೆಲಸ ಮಾಡಬೇಕು, ಯೂಸರ್ ಗೆ ಅದು ಹೇಗೆ ಸುಲಭ ಅನಿಸಬೇಕು ಅನ್ನೋದನ್ನ ನೀನು ಪ್ಲಾನ್ ಮಾಡಬೇಕು. ಇದಕ್ಕೂ ಮ್ಯಾಥ್ಸ್ ಗೂ ಯಾವುದೇ ಸಂಬಂಧವಿಲ್ಲ. ಹಾಗಾಗಿ ಆ ಬ್ಯಾಕ್ ಲಾಗ್ನ್ನ ಇಟ್ಟುಕೊಂಡೇ ನೀನು ಕೋಡಿಂಗ್ ನಲ್ಲಿ ಎಕ್ಸ್ ಪರ್ಟ್ ಆಗಬಹುದು.
ತುಂಬಾ ಜನ ಹುಡುಗರು ಮ್ಯಾಥ್ಸ್ ಫೇಲ್ ಆದ ತಕ್ಷಣ ಅಳುಕುತ್ತಾರೆ. ಕ್ಲಾಸ್ನಲ್ಲಿ ಯಾರು ಫಸ್ಟ್ ಬರ್ತಾರೋ ಅವರು ಮಾತ್ರ ಇಂಜಿನಿಯರ್ ಗಳು ಅಂತ ಅನ್ಕೊಂಡಿರ್ತಾರೆ. ಮಗಾ, ನೆನಪಿಟ್ಟುಕೋ, ರೇಸ್ನಲ್ಲಿ ಮೊದಲು ಓಡೋ ಕುದುರೆಗಿಂತ ಕೊನೆಯಲ್ಲಿ ಬಂದು ಗೆಲ್ಲೋ ಕುದುರೆಗೆ ಬೆಲೆ ಜಾಸ್ತಿ. ನೀನು ನಿಧಾನವಾಗಿ ಕಲಿಬಹುದು, ಆದ್ರೆ ಕಲಿತಿದ್ದನ್ನ ಪರ್ಫೆಕ್ಟ್ ಆಗಿ ಕಲಿ. ಕೋಡಿಂಗ್ ಎಂಬುದು ಒಂದು ತಪಸ್ಸು ಇದ್ದ ಹಾಗೆ. ದಿನಾ ಅಭ್ಯಾಸ ಮಾಡಿದರೆ ಅದು ನಿನಗೆ ಒಲಿಯುತ್ತೆ. ಅಲ್ಲಿ ಯಾವ ಮ್ಯಾಥ್ಸ್ ಟೀಚರ್ ನಿನ್ನನ್ನು ಜಡ್ಜ್ ಮಾಡೋಕೆ ಬರಲ್ಲ.
ಇನ್ನೊಂದು ವಿಷಯ ಅಂದ್ರೆ, ಈಗಿನ ಎಐ ಯುಗದಲ್ಲಿ ನಿನಗೆ ಮ್ಯಾಥ್ಸ್ ಸಾಲ್ವ್ ಮಾಡೋಕೆ ಚಾಟ್ ಜಿಪಿಟಿ ಅಥವಾ ಬೇರೆ ಟೂಲ್ ಗಳು ಇವೆ. ನೀನು ಲಾಜಿಕ್ ಬರೆದರೆ ಸಾಕು, ಕ್ಯಾಲ್ಕುಲೇಷನ್ ನ ಅವೇ ಮಾಡಿಕೊಡ್ತಾವೆ. ಹಾಗಾಗಿ ತಂತ್ರಜ್ಞಾನ ನಿನಗೆ ಸಪೋರ್ಟ್ ಮಾಡೋಕೆ ಇರುವಾಗ ನೀನ್ಯಾಕೆ ಸುಮ್ಮನೆ ಟೆನ್ಷನ್ ಮಾಡ್ಕೊತೀಯಾ? ನೀನು ಮಾಡಬೇಕಿರೋದು ಇಷ್ಟೇ, ನಿನ್ನ ಫೇಲ್ಯೂರ್ ನ ಎದುರಿಸಿ ಆ ಸಬ್ಜೆಕ್ಟ್ ನ ಹೇಗೋ ಪಾಸ್ ಮಾಡಿಕೋ, ಆದ್ರೆ ಅದರ ಜೊತೆ ಜೊತೆಗೆ ಕೋಡಿಂಗ್ ನಲ್ಲಿ ನಿನ್ನ ಸಾಮ್ರಾಜ್ಯ ಕಟ್ಟೋಕೆ ಶುರು ಮಾಡು.
🟢 ನಿರಂತರ ಅಪ್ಡೇಟ್ ಪಡೆಯಲು ನಮ್ಮ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ JOIN ➤
ಯಾರು ಮ್ಯಾಥ್ಸ್ನಲ್ಲಿ ಕಷ್ಟ ಪಡ್ತಾರೋ ಅವರಿಗೆ ಛಲ ಜಾಸ್ತಿ ಇರುತ್ತೆ ಅನ್ನೋದು ನನ್ನ ಅನುಭವ. ಆ ಛಲವನ್ನೇ ಕೋಡಿಂಗ್ನಲ್ಲಿ ತೋರಿಸು. ಒಂದು ಕೋಡ್ ಎರರ್ ಬಂದಾಗ ಅದು ಸರಿಯಾಗೋವರೆಗೂ ಬಿಡಬೇಡ. ಆ ಹಠವೇ ನಿನ್ನನ್ನು ಬೆಸ್ಟ್ ಕೋಡರ್ ಮಾಡುತ್ತೆ. ಮ್ಯಾಥ್ಸ್ ಟಾಪರ್ ಗಳಿಗೆ ಎಷ್ಟೋ ಸಲ ಸೋಲನ್ನ ಅನುಭವಿಸೋದು ಗೊತ್ತಿರಲ್ಲ, ಆದ್ರೆ ನಿನಗೆ ಆ ಮೊದಲೇ ಅನುಭವ ಆಗಿದೆ. ಇದು ನಿನಗೆ ಸಾಫ್ಟ್ವೇರ್ ಕೆಲಸದಲ್ಲಿ ಬರೋ ಅಡೆತಡೆಗಳನ್ನು ಎದುರಿಸೋಕೆ ದೊಡ್ಡ ಶಕ್ತಿ ಕೊಡುತ್ತೆ.
ನಿನ್ನ ಫ್ರೆಂಡ್ಸ್ ಯಾರಾದರೂ ಮ್ಯಾಥ್ಸ್ ಫೇಲ್ ಆಗಿ ಮೂಲೆಯಲ್ಲಿ ಕೂತಿದ್ದರೆ ಅವರಿಗೂ ಈ ವಿಷಯ ತಿಳಿಸು. ಇಂಜಿನಿಯರಿಂಗ್ ಅಂದ್ರೆ ಬರಿ ಮಾರ್ಕ್ಸ್ ಕಾರ್ಡ್ ಅಲ್ಲ, ಅದೊಂದು ಜೀವನ ಪಾಠ. ಇಲ್ಲಿ ನೀನು ಬೀಳೋದು ಮುಖ್ಯ ಅಲ್ಲ, ಬಿದ್ದ ಮೇಲೆ ಹೇಗೆ ಎದ್ದು ನಿಂತು ಓಡ್ತೀಯಾ ಅನ್ನೋದು ಮುಖ್ಯ. ಬ್ಯಾಕ್ ಲಾಗ್ ಇರೋದೆಲ್ಲ ಬ್ಯಾಡ್ ಲಕ್ ಅಲ್ಲ, ಅದು ನಿನ್ನ ಲಕ್ ಬದಲಿಸೋ ಸ್ಟಾರ್ಟಿಂಗ್ ಪಾಯಿಂಟ್ ಆಗಬಹುದು. ಹಾಗಾಗಿ ಧೈರ್ಯವಾಗಿ ಇರು, ಕೋಡಿಂಗ್ ಕಲಿಯೋದನ್ನ ಮಾತ್ರ ನಿಲ್ಲಿಸಬೇಡ.
ಹಾಗಾದ್ರೆ ಮಗಾ, ಇವತ್ತೇ ನಿನ್ನ ಲ್ಯಾಪ್ಟಾಪ್ ಓಪನ್ ಮಾಡು. ಲ್ಯಾಪ್ಟಾಪ್ ಇಲ್ವಾ? ಅಥ್ವಾ ಯಾವ್ದು ತಗೋಬೇಕು ಅಂತ ಗೊತ್ತಾಗ್ತಾ ಇಲ್ವಾ? ಒಂದು ವೇಳೆ ಕೋಡಿಂಗ್ಗೆ ಹೊಸ ಲ್ಯಾಪ್ಟಾಪ್ ಹುಡುಕ್ತಾ ಇದ್ದೀಯಾ? ಇದನ್ನ ಒಮ್ಮೆ ಚೆಕ್ ಮಾಡು. ಇಷ್ಟ ಆದ್ರೆ ತಗೋ..
ಆ ಎಂ1 ರಿಸಲ್ಟ್ ನ ಕಹಿ ನೆನಪನ್ನ ಮರೆಯೋಕೆ ಒಂದು ಸ್ವೀಟ್ ಕೋಡ್ ಬರಿ. ಅದು ಹಲೋ ವರ್ಲ್ಡ್ ಆದ್ರೂ ಪರವಾಗಿಲ್ಲ, ಅದರಿಂದಲೇ ನಿನ್ನ ಹೊಸ ಪಯಣ ಶುರುವಾಗಲಿ. ಈ ಸ್ಟುಡೆಂಟ್ ಸರಣಿಯಲ್ಲಿ ನಿನಗೆ ಇಂತದ್ದೇ ಹತ್ತಾರು ಕಾನ್ಫಿಡೆನ್ಸ್ ತುಂಬೋ ವಿಷಯಗಳನ್ನ ನಾನು ಹೇಳ್ತಾ ಇರ್ತೀನಿ. ಟೆಕ್ ವೈದ್ಯ ಸದಾ ನಿನ್ನ ಬೆನ್ನಿಗಿರುತ್ತೆ ಅನ್ನೋದನ್ನ ಮರಿಬೇಡ.
ಈ ಲೇಖನಗಳನ್ನೂ ಓದಿ
❤️ ಎಐ ರಾಪರ್ ಸ್ಟಾರ್ಟಪ್ ಗಳಿಗೆ ಕಾದಿದೆ ಕಂಟಕ: ಗೂಗಲ್ ಎಚ್ಚರಿಕೆ!
❤️ ರಕ್ತದ ಹನಿ ಇಲ್ಲ, ಸೂಜಿ ಚುಚ್ಚುವ ಭಯವಿಲ್ಲ: ಆರೋಗ್ಯ ಕ್ಷೇತ್ರವನ್ನೇ ಬದಲಿಸುತ್ತಿರುವ 'ವೇರಬಲ್' ಕ್ರಾಂತಿ!
❤️ ಬೆಂಗಳೂರಿನ ಟ್ರಾಫಿಕ್ ಕಾಯಿಲೆಗೆ ಎಐ ಚಿಕಿತ್ಸೆ!
❤️ ಡೆಲಿವರಿ ಹುಡುಗರ ಸುರಕ್ಷತೆಗೆ ಜಿಬಿಎ ನೀಡಿದ ದೊಡ್ಡ ಉಡುಗೊರೆ!
❤️ ಎಐ: ಅಪೂರ್ಣತೆಯ ಸೌಂದರ್ಯ ಮತ್ತು ಪರಿಪೂರ್ಣತೆಯ ಅನಿವಾರ್ಯತೆ!
🟢 ನಿರಂತರ ಅಪ್ಡೇಟ್ ಪಡೆಯಲು ನಮ್ಮ ವಾಟ್ಸಾಪ್ ಚಾನೆಲ್ ಫಾಲೋ ಮಾಡಿ JOIN ➤
🛒 ಆನ್ಲೈನ್ ಶಾಪಿಂಗ್
0 ಕಾಮೆಂಟ್ಗಳು
ಇನ್ನೂ ಯಾವುದೇ ಕಾಮೆಂಟ್ಗಳಿಲ್ಲ.
ಕಾಮೆಂಟ್ ಮಾಡಿ
ಚಂದಾದಾರರಾಗಿ
ಬ್ರೇಕಿಂಗ್ ನ್ಯೂಸ್, ಟ್ರೆಂಡಿಂಗ್ ಸ್ಟೋರಿ ಆಳವಾದ ವಿಶ್ಲೇಷಣೆಗಳನ್ನು ನಿರಂತರವಾಗಿ ಪಡೆಯಲು ಉಚಿತವಾಗಿ ಚಂದಾದಾರರಾಗಿ.
