ಟ್ರೆಂಡಿಂಗ್

ಸ್ಕೂಟರ್ ಆಯ್ತು, ಈಗ ಬ್ಯಾಟರಿ ಸರದಿ: ಓಲಾ ಹೊಸ ಬಿಸಿನೆಸ್ ಶುರು!

ಸ್ಕೂಟರ್ ಆಯ್ತು, ಈಗ ಬ್ಯಾಟರಿ ಸರದಿ: ಓಲಾ ಹೊಸ ಬಿಸಿನೆಸ್ ಶುರು!

ಓಲಾ ಈಗ ಸ್ಕೂಟರ್ ಕಂಪನಿಯಿಂದ ಎನರ್ಜಿ ಕಂಪನಿಯಾಗಿ ಪ್ರಮೋಷನ್ ಪಡ್ಕೊಂಡಿದೆ. ಸರ್ವಿಸ್ ಸುಧಾರಿಸದೆ ಬರೀ ಪ್ರಾಡಕ್ಟ್ ಲಾಂಚ್ ಮಾಡಿದ್ರೆ ಏನಾಗುತ್ತೆ ಅಂತ ಕಾದು ನೋಡಬೇಕು.

ಓಲಾ ಎಲೆಕ್ಟ್ರಿಕ್ ಅಂದ್ರೆ ಬರೀ ಸ್ಕೂಟರ್ ಮಾರೋ ಕಂಪನಿ ಅಂತ ನೀವಂದುಕೊಂಡಿದ್ರೆ ಅದು ತಪ್ಪು. ಓಲಾ ಸಿಇಒ ಭವಿಶ್ ಅಗರ್ವಾಲ್ ಈಗ ಸ್ಕೂಟರ್ ಆಚೆಗೆ ಕಣ್ಣು ಹಾಕಿದ್ದಾರೆ. 'ಪ್ರಾರಂಭ 2026' ಕಾರ್ಯಕ್ರಮದಲ್ಲಿ ಅವರು ಮಾಡಿರುವ ಘೋಷಣೆ ನೋಡಿದ್ರೆ, ಓಲಾ ಈಗ ಪಕ್ಕಾ 'ಬ್ಯಾಟರಿ ಅಂಗಡಿ'ಯಾಗಿ ಬದಲಾಗುವ ಲಕ್ಷಣ ಕಾಣ್ತಿದೆ.
ಹೌದು, ಓಲಾ ಇಷ್ಟು ದಿನ ತನ್ನ ಸ್ಕೂಟರ್‌ಗಳಿಗೆ ಮಾತ್ರ ಬಳಸುತ್ತಿದ್ದ '4680 ಭಾರತ್ ಸೆಲ್' ಬ್ಯಾಟರಿಯನ್ನು ಇನ್ಮುಂದೆ ಯಾರು ಬೇಕಾದ್ರೂ ಕೊಂಡುಕೊಳ್ಳಬಹುದು. ಅಂದ್ರೆ, ನೀವು ನಾಳೆ ಒಂದು ಎಲೆಕ್ಟ್ರಿಕ್ ಆಟಿಕೆ ತಯಾರು ಮಾಡಿದ್ರೂ, ಅದಕ್ಕೆ ಬೇಕಾದ ಬ್ಯಾಟರಿಯನ್ನು ಓಲಾದಿಂದಲೇ ತರಿಸಿಕೊಳ್ಳಬಹುದು. ಡ್ರೋನ್ ಕಂಪನಿಗಳು, ರೋಬೋಟ್ ತಯಾರು ಮಾಡುವವರು ಇನ್ಮುಂದೆ ಬ್ಯಾಟರಿಗಾಗಿ ಚೀನಾ ಕಡೆ ಮುಖ ಮಾಡೋದು ಬೇಡ ಅನ್ನೋದು ಓಲಾ ಪ್ಲಾನ್. ಆದರೆ, ಸ್ವಂತ ಸ್ಕೂಟರ್‌ಗಳಿಗೇ ಸ್ಪೇರ್ ಪಾರ್ಟ್ಸ್ ಕೊಡೋಕೆ ಪರದಾಡ್ತಿರೋ ಓಲಾ, ಬೇರೆಯವರಿಗೆ ಬ್ಯಾಟರಿ ಸಪ್ಲೈ ಮಾಡೋಕೆ ಆಗುತ್ತಾ ಅನ್ನೋದು ಮಿಲಿಯನ್ ಡಾಲರ್ ಪ್ರಶ್ನೆ.


ಇನ್ನೊಂದು ವಿಷ್ಯ ಅಂದ್ರೆ 'ಓಲಾ ಶಕ್ತಿ'. ಇದೇನಪ್ಪಾ ಅಂದ್ರೆ, ನಮ್ಮ ಮನೆಯ ಯುಪಿಎಸ್ ಇದ್ದಹಾಗೆ. ಆದರೆ ಇದು ಮಾಡರ್ನ್ ವರ್ಶನ್. ಮನೆಗೆ ಬೇಕಾದ ಕರೆಂಟ್ ಅನ್ನು ಇದರಲ್ಲಿ ಸ್ಟೋರ್ ಮಾಡಿ ಇಟ್ಟುಕೊಳ್ಳಬಹುದು. ಇದರ ಬೆಲೆ ಕೇಳಿದ್ರೆ ಶಾಕ್ ಆಗೋದು ಗ್ಯಾರಂಟಿ. ಆರಂಭಿಕ ಬೆಲೆಯೇ ಒಂದೂವರೆ ಲಕ್ಷ ರೂಪಾಯಿ (1,49,999). ದೊಡ್ಡ ಮಾಡೆಲ್‌ಗೆ ಎರಡೂವರೆ ಲಕ್ಷ. ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಇನ್ವರ್ಟರ್ ಸಿಗ್ತಿರೋವಾಗ, ಜನ ಇದನ್ನ ಯಾಕೆ ತಗೋತಾರೆ ಅನ್ನೋದು ಕಂಪನಿಗೇ ಗೊತ್ತು.


ಬೈಕ್ ಪ್ರಿಯರಿಗೆ ಒಂದು ಸಮಾಧಾನದ ಸುದ್ದಿ ಇದೆ. ಓಲಾದ ಹೊಸ ರೋಡ್‌ಸ್ಟರ್ X+ (Roadster X+) ಬೈಕ್ ಡೆಲಿವರಿ ಶುರುವಾಗಿದೆ. ಇದು ಫುಲ್ ಚಾರ್ಜ್ ಮಾಡಿದ್ರೆ 500 ಕಿಲೋಮೀಟರ್ ಓಡುತ್ತೆ ಅಂತ ಕಂಪನಿ 'ರೀಲ್' ಬಿಟ್ಟಿದೆ, ಸಾರಿ, ಹೇಳಿಕೊಂಡಿದೆ. ರಸ್ತೆ ಗುಂಡಿಗಳಲ್ಲಿ, ಟ್ರಾಫಿಕ್‌ನಲ್ಲಿ ನಿಜಕ್ಕೂ ಅಷ್ಟು ಮೈಲೇಜ್ ಕೊಡುತ್ತಾ ಅನ್ನೋದನ್ನ ಓಡಿಸಿದವರೇ ಹೇಳ್ಬೇಕು. ಬೈಕ್ ಬೆಲೆ 1,89,999 ರೂಪಾಯಿ. ಒಟ್ಟಿನಲ್ಲಿ ಓಲಾ ಈಗ ಸ್ಕೂಟರ್ ಕಂಪನಿಯಿಂದ ಎನರ್ಜಿ ಕಂಪನಿಯಾಗಿ ಪ್ರಮೋಷನ್ ಪಡ್ಕೊಂಡಿದೆ. ಸರ್ವಿಸ್ ಸುಧಾರಿಸದೆ ಬರೀ ಪ್ರಾಡಕ್ಟ್ ಲಾಂಚ್ ಮಾಡಿದ್ರೆ ಏನಾಗುತ್ತೆ ಅಂತ ಕಾದು ನೋಡಬೇಕು.

 

Nagaraj Vaidya
Nagaraj Vaidya
Editor | Tech Vaidya
161

0 ಕಾಮೆಂಟ್‌ಗಳು

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ.

ಕಾಮೆಂಟ್ ಮಾಡಿ

ಚಂದಾದಾರರಾಗಿ

ಬ್ರೇಕಿಂಗ್‌ ನ್ಯೂಸ್, ಟ್ರೆಂಡಿಂಗ್ ಸ್ಟೋರಿ ಆಳವಾದ ವಿಶ್ಲೇಷಣೆಗಳನ್ನು ನಿರಂತರವಾಗಿ ಪಡೆಯಲು ಉಚಿತವಾಗಿ ಚಂದಾದಾರರಾಗಿ.

Follow Us
ಜಾಹೀರಾತು

ಸಂಬಂಧಿತ ಸುದ್ದಿ

ಚಂದಾದಾರರಾಗಿ

ಬ್ರೇಕಿಂಗ್‌ ನ್ಯೂಸ್, ಟ್ರೆಂಡಿಂಗ್ ಸ್ಟೋರಿ ಆಳವಾದ ವಿಶ್ಲೇಷಣೆಗಳನ್ನು ನಿರಂತರವಾಗಿ ಪಡೆಯಲು ಉಚಿತವಾಗಿ ಚಂದಾದಾರರಾಗಿ.