ಟೆಕ್ಕಿನ ತೆಕ್ಕೆಯಲ್ಲಿ ಒದ್ದಾಡುವ ಹಿರಿಮನಸ್ಸು! - Tech Vaidya

ಟೆಕ್ಕಿನ ತೆಕ್ಕೆಯಲ್ಲಿ ಒದ್ದಾಡುವ ಹಿರಿಮನಸ್ಸು!

ಟೆಕ್‌-ಕಿಲ!, ಬಡೆಕ್ಕಿಲರಾಜಾಜಿನಗರದ ಸರಸ್ವತಿ ಅವರದು ರಿಟೈರ್ಡ್‌ ಲೈಫು. ಟೀಚರ್ರಾಗಿ ಸಮೃದ್ಧ ಜೀವನ ನಡೆಸಿ ಈಗ ಏಕಾಂಗಿಯಾಗಿ ಸ್ವಾಭಿಮಾನದ ಜೀವನ ಸವೆಸುತ್ತಿರುವ ಹೆಮ್ಮೆ. ಒಂದೆಡೆ ಅಮೆರಿಕಾದಲ್ಲಿರುವ ಮಗಳು, ಪುಣೆಯಲ್ಲಿರುವ ಮಗ, ಜೊತೆಗೆ, ಬಿಟ್ಟುಹೋದ ಗಂಡನ ಕಾಡುವ ನೆನಪು.
ಕೈಯಲ್ಲಿ ಸ್ಮಾರ್ಟ್‌ ಫೋನಿದೆ. ಬೆಳ್ಳಂಬೆಳಗ್ಗೆ ಎದ್ದು ಕಾಫಿ ಮಾಡ್ತಾ ಯೂಟ್ಯೂಬ್‌ನಲ್ಲಿ ತನ್ನಿಷ್ಟದ ದೇವರನಾಮಗಳನ್ನು ಕೇಳುತ್ತಾ ದಿನ ಶುರು ಮಾಡುವ ಅವರ ಮನೆಗೆ ಬರುವ ಹಾಲು-ತರಕಾರಿಗಳಿಗೆ ಯುಪಿಐ ಮೂಲಕ ದುಡ್ಡು ಕಳುಹಿಸುವಷ್ಟು ಟೆಕ್‌ ಪ್ರವೀಣೆ. ಹೊತ್ತು ಕಳೆಯುವ ವೇಳೆ ಮಗಳಿಗೆ ವಾಟ್ಸ್ಯಾಪ್‌ ಕಾಲ್‌ ಮಾಡುವ, ತನಗೆ ಬೇಕಾದ್ದನ್ನು ಯುಪಿಐ ಮೂಲಕ ಖರೀದಿಸುವಷ್ಟು ತಂತ್ರಜ್ಞಾನ ಗೊತ್ತಿದೆ ಅನ್ನುವ ಬಗ್ಗೆ ಒಳಗೊಳಗೇ ಹೆಮ್ಮೆ, ಅದನ್ನೇ ಪಕ್ಕದ ಮನೆಯವರೆದುರು ಎದೆಯುಬ್ಬಿಸಿ ಹೇಳಿಕೊಳ್ಳುವುದೂ ನಡೆದಿದೆ. 
ಆದರೆ ಒಂದು ದಿನ ಅವಳಿಗೆ ʼಬ್ಯಾಂಕ್‌ʼನಿಂದ ಕಾಲ್‌ ಬರತ್ತೆ. ಆ ಕಡೆಯಿಂದ ಸಂಭಾವಿತರಂತೆ ಧ್ವನಿಸುವ ವ್ಯಕ್ತಿ, ನಿಮ್ಮ ಕೆವೈಸಿ ಅಪ್‌ಡೇಟ್‌ ಮಾಡಬೇಕಿದೆ, ಇಲ್ಲಾಂದ್ರೆ ಅಕೌಂಟ್‌ ಫ್ರೀಝ್‌ ಆಗುತ್ತದೆ ಅನ್ನುವ ಮಾತುಗಳನ್ನು ಕೇಳಿ, ಅವನು ಹೇಳಿದ ಹಾಗೇ ತನ್ನ ಮೊಬೈಲಿಗೆ ಬಂದ ಓಟಿಪಿಯನ್ನು ಅವನಿಗೆ ಹೇಳಿ ಹತ್ತು ನಿಮಿಷದಲ್ಲಿ ಅವಳ ಬ್ಯಾಂಕ್‌ನಲ್ಲಿದ್ದ ಅವಳ ಜೀವಮಾನದ ಸೇವಿಂಗ್ಸ್‌ ಎಲ್ಲಾ ಮಟಾಮಾಯ!

ಇದು ಸರಸ್ವತಿ ಅವರೊಬ್ಬರದಲ್ಲ, ಹುಡುಕುತ್ತಾ ಹೋದರೆ ಈ ರೀತಿಯ, ಮತ್ತು ಡಿಜಿಟಲ್‌ ಅರೆಸ್ಟ್‌ ಎನ್ನುವ ರೀತಿಯ, ಇದಲ್ಲದೇ ಹಲವಾರು ವಿಧಧ ಆನ್‌ಲೈನ್‌ ಫ್ರಾಡ್‌ಗಳು ನಿರಂತರವಾಗಿ ನಡೆಯುತ್ತಲೇ ಇವೆ. ಇವೆಲ್ಲದರಲ್ಲೂ ಹೆಚ್ಚಾಗಿ ಸಿಕ್ಕಿಹಾಕಿಕೊಳ್ಳುತ್ತಿರುವುದು ಮಧ್ಯವಯಸ್ಸನ್ನು ದಾಟಿದ, ಟೆಕ್ನಾಲಜಿಯನ್ನು ಅಷ್ಟಾಗಿ ಅಳವಡಿಸಿಕೊಳ್ಳುವುದು ಅನಿವಾರ್ಯವೆನಿಸಿಕೊಂಡಿರುವ ಒಂದಿಷ್ಟು ಮಂದಿ.
ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕದಲ್ಲಿ ಡಿಜಿಟಲ್‌ ಅರೆಸ್ಟ್‌ ಕೇಸ್‌ಗಳಲ್ಲಿ 470 ಕೋಟಿಯಷ್ಟು ಹಣ ಮೋಸಗಾರರ ಪಾಲಾಗಿದೆ. ಇನ್ನು ಮಹಾರಾಷ್ಟ್ರದ ನಾಗಪುರ ನಗರದ ಕಥೆ ಕೇಳುವುದಾದರೆ, ಕಳೆದ ವರ್ಷದ ಒಟ್ಟಾರೆ ಸೈಬರ್‌ ಫ್ರಾಡ್‌ಗಳ ಪೈಕಿ ೬೦ ಶೇಕಡಾ ವಿಕ್ಟಿಮ್‌ಗಳು ವಯಸ್ಸಾದವರೇ ಅನ್ನುವ ಶಾಕಿಂಗ್‌ ಅಂಶ ಬೆಳಕಿಗೆ ಬಂದಿದೆ.
ಯಾಕೆ ಹೀಗೆ? ಯಾಕೀ ಸೈಬರ್‌ ಕ್ರಿಮಿನಲ್‌ಗಳು ವಯಸ್ಸಾದವರನ್ನೇ ತಮ್ಮ ಟಾರ್ಗೆಟ್‌ ಮಾಡಿಕೊಳ್ಳುತ್ತಾರೆ? 
ಆನ್‌ಲೈನ್‌ ಮೋಸದ ಜಾಲ ತುಂಬಾ ಆಳವಾದ್ದು ಮತ್ತು ಇಂದಿನ ಆನ್‌ಲೈನ್‌ ಯುಗದಲ್ಲಿ ಯಾರಾದರೊಬ್ಬರ ಮಾಹಿತಿಯನ್ನು ಕಲೆಹಾಕುವುದು ಕಷ್ಟಸಾಧ್ಯವೇನಲ್ಲ. ಇದರಲ್ಲಿ ವ್ಯಕ್ತಿಯ ವಯಕ್ತಿಕ ಮಾಹಿತಿ ಸುಲಭದಲ್ಲಿ ಕೈಸಿಗುತ್ತದೆ. ಅದನ್ನು ಬಳಸಿಕೊಂಡು, ತಮ್ಮ ಜಾಲಕ್ಕೆ ಸುಲಭದಲ್ಲಿ ಬೀಳುವ, ತಮ್ಮ ಮಾತನ್ನು ಸರಳವಾಗಿ ನಂಬಿಬಿಡುವ ವ್ಯಕ್ತಿಗಳ ಆಯ್ಕೆಯಲ್ಲಿ ಈ ಜಾಲ ಬ್ಯುಸಿ ಇರುತ್ತದೆ.
ಕಾರಣ, ವಯಸ್ಸಾದವರು ಜೀವನಪೂರ್ತಿಯ ಸೇವಿಂಗ್‌ಗಳನ್ನು ಅಕೌಂಟ್‌ಗಳಲ್ಲೇ ಕೂಡಿಟ್ಟಿರುತ್ತಾರೆ. ಅವರಿಗೆ ಈ ರೀತಿಯ ಆಫೀಸರ್‌ಗಳ ಮೇಲೆ ಅಪಾರ ಗೌರವ ಇರುತ್ತದೆ, ಮತ್ತು ಮೊದಲೇ ಇದು ಆನ್‌ಲೈನ್‌ ಜಾಲ, ಇದರ ಬಗ್ಗೆ ಹೆಚ್ಚು ಅರಿವಿಲ್ಲದೆ ಹಾಗೂ ತಮ್ಮ ಮೇಲಾಗುವ ಅವಮಾನಗಳಿಗೆ ಹೆದರಿ, ಈ ರೀತಿಯ ಕೇಸ್‌ಗಳನ್ನು ಕಂಪ್ಲೇನ್‌ ಮಾಡುವುದೂ ಕೂಡ ಅವರಿಗೆ ಭಯ ಮೂಡಿಸುತ್ತದೆ. 
ಸೋ, ಸುಲಭದ ಮಿಕಗಳನ್ನಾಗಿ ಇವರು ವಯಸ್ಸಾದವರನ್ನು ಬಳಸಿಕೊಂಡು, ತಮ್ಮ ಟ್ರ್ಯಾಪ್‌ ಹಾಕಿಕೊಳ್ಳುತ್ತಾರೆ. ಡಿಜಿಟಲ್‌ ಯುಗ ಮಾತ್ರ ಒಂದು ಕರಾಳ ಅಧ್ಯಾಯವನ್ನು ಈ ಸೀನಿಯರ್‌ ಸಿಟಿಝನ್‌ಗಳ ಜೀವನದಲ್ಲಿ ಸೃಷ್ಟಿಸಿಬಿಡುತ್ತದೆ.
ಇಲ್ಲಿ ತಪ್ಪು ಯಾರದ್ದು? ಹೊಸ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ಸೀನಿಯರ್‌ಗಳದ್ದಾ? ಅಥವಾ ತಮ್ಮವರು ಎಂದು ಪ್ರೀತಿಯಿಂದ ಅವರಿಗೆ ಸ್ಮಾರ್ಟ್‌ಫೋನ್‌ಗಳನ್ನು ಕೊಡುವ, ಅದಾದ ಮೇಲೆ ಅವರಿಗೆ ಫೋನ್‌ ಮಾಡುವುದಕ್ಕೆ, ವಾಟ್ಸ್ಯಾಪ್‌ ಕಾಲ್‌ ಮಾಡುವುದಕ್ಕೆ ಬಿಟ್ಟು, ಅದಕ್ಕಿಂತ ಹೆಚ್ಚಾಗಿ ಕಲಿಸದೇ ಬಿಟ್ಟ ಅವರ ಮಕ್ಕಳದ್ದಾ?
ನಮ್ಮವರಿಗೆ ಫೋನ್‌ ಕೊಡಿಸುವುದು ತಪ್ಪಲ್ಲ. ಆದರೆ ಅವರಿಗೆ ಇದೆಲ್ಲಾ ಹೊಸತು, ನಮ್ಮನ್ನೇ ಯಾಮಾರಿಸುವವರು ಲೋಕದಲ್ಲಿ ತುಂಬಾ ಜನ ಇರುವಾಗ, ನಾವು ಟೆಕ್ನಾಲಜಿ ಬಗ್ಗೆ ಹೆಚ್ಚು ಪರಿಚಯ ಇಲ್ಲದ ತಮ್ಮ ಹೆತ್ತವರಿಗೆ ಅದನ್ನು ಹೇಗೆ ಬಳಸಬೇಕು, ಯಾವುದರ ಬಗ್ಗೆ ಜಾಗರೂಕರಾಗಿರಬೇಕು ಅನ್ನುವ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡುವುದು ಅನಿವಾರ್ಯದ ವಿಷಯ. ನಮ್ಮ ಸುತ್ತ ಈ ಲೇಖನದ ಹಾಗೆ, ಅವೆಷ್ಟೋ ಬರಹಗಳು ಈ ರೀತಿಯ ಡಿಜಿಟಲ್‌ ಫ್ರಾಡ್‌ಗಳ ಬಗ್ಗೆ ನಿರಂತರವಾಗಿ ಮಾಹಿತಿಯನ್ನು ನೀಡುತ್ತವೆ. ಅದನ್ನು ನಾವು ಓದಿ ಸುಮ್ಮನಾಗುತ್ತೇವೆ, ಅಥವಾ ನಮ್ಮ ಹೆತ್ತವರಿಗೆ ಈ ವಿಚಾರವಾಗಿ ಹೇಳಿಯೂ ಇರಲೂ ಬಹುದು. ಆದರೆ ಅಷ್ಟಕ್ಕೇ ನಿಲ್ಲದೇ, ಅವರಿಗೆ ಯಾವುದು ಗುಡ್‌ ಟಚ್‌, ಯಾವುದು ಬ್ಯಾಡ್‌ ಟಚ್‌ ಅನ್ನುವ ರೀತಿಯಲ್ಲಿ ನಾವು ಮಕ್ಕಳಾಗಿದ್ದಾಗ ಹೇಳಿಕೊಟ್ಟು ನಮ್ಮನ್ನು ಸೇಫ್‌ ಮಾಡಿದರೋ, ಅದೇ ರೀತಿ ಅವರನ್ನು ಸೇಫ್‌ ಆಗಿಡುವುದು, ಅವರ ಸಂಪತ್ತನ್ನು ಉಳಿಸಿಕೊಡುವ ಪಾತ್ರ ನಮ್ಮೆಲ್ಲರದು, ಎನ್ನುವುದನ್ನು ಮರೆಯಬಾರದು.
ಸುಮಾರು ೬ ಸಾವಿರ ಸೀನಿಯರ್‌ ಸಿಟಿಝನ್‌ಗಳನ್ನು ಸರ್ವೇ ಮಾಡಿರುವ ಹೆಲ್ಪೇಜ್‌ ಇಂಡಿಯಾದ ಪ್ರಕಾರ ೬೬ ಶೇಕಡಾ ಮಂದಿ ಟೆಕ್ನಾಲಜಿ ಅಂದರೆ ಕನ್ಫ್ಯೂಸ್‌ ಆಗುತ್ತಾರೆ. ಅಲ್ಲದೇ, ೭೬ ಶೇಕಡಾ ಮಂದಿಯ ಪ್ರಕಾರ ಅವರ ಮಕ್ಕಳಿಗೆ ಅವರೊಂದಿಗೆ ಸಮಯ ಕಳೆಯುವುದೇ ಕಷ್ಟವಾಗುತ್ತದೆ. ವಿಶೇಷ ಅಂದರೆ, ಸುಮಾರು ೭೪ ಶೇಕಡಾ ಯುವಜನತೆ ಈ ಮಾತನ್ನು ಒಪ್ಪುತ್ತಾರೆ ಕೂಡ. 
ಹೀಗೆ, ಡಿಜಿಟಲ್‌ ಇಂಡಿಯಾವನ್ನು ಬೆಳೆಸುವಾಗ, ಎಲ್ಲರಿಗೂ ತಂತ್ರಜ್ಞಾನ ಅನ್ನುವುದು ಒಲಿದುಬಂದಿದೆ, ಎಲ್ಲರಿಗೂ ಅರ್ಥವಾಗುತ್ತದೆ ಎನ್ನುವ ಯೋಚನೆಯಲ್ಲೇ ಬೆಳೆಸಿದಂತಿದೆ, ಆದರೆ ಸುಮಾರು ೧೭.೩ ಕೋಟಿಯಷ್ಟಿರುವ ವಯಸ್ಸಾದವರಿಗೆ ಟೆಕ್ನಾಲಜಿಯ ಅ-ಆ-ಇ-ಈ ಕೂಡ ಅರ್ಥವಾಗುವುದು ಕಷ್ಟ ಎನ್ನುವ ಸತ್ಯವನ್ನು ಅದು ಮರೆತಂತಿದೆ.
ಹೀಗಾಗಿ, ಒಂದೆಡೆ ಸೀನಿಯರ್‌ಗಳು ತಂತ್ರಜ್ಞಾನ ಪೂರ್ತಿ ಬಳಸುವುದು ಗೊತ್ತಿಲ್ಲದಿದ್ದರೂ ಸರಿ, ಅದನ್ನು ಸೇಫಾಗಿ ಬಳಸಲು ಬೇಕಾಗಿರುವ ಕೆಲವು ಮಾರ್ಗದರ್ಶಿಗಳನ್ನು ಪಾಲಿಸುವಂತೆ ನೋಡಿಕೊಳ್ಳುವುದು ಅವರ ಮಕ್ಕಳು-ಮೊಮ್ಮಕ್ಕಳ ಕರ್ತವ್ಯ.

ಟೆಕ್‌-ವಚನ:
ಕಲಿಸದೆ ಕೊಟ್ಟ ಫೋನು ಕೈಯಲ್ಲಿ ಚೂರಿ ಇದ್ದಂತೆ
ಕಾಳಜಿ ಇಲ್ಲದ ಕೊಡುಗೆ ಕೇಡೇ ತರುವುದು | ಜಗದೊಳು
ಟೆಕ್ಕು ಹೊಕ್ಕಿಲ್ಲದ ಲೋಕವಿಲ್ಲ ತಂತ್ರಜ್ಞ ||

❤️ ಈ ಲೇಖನಗಳನ್ನೂ ಓದಿ

Tech Vaidya WhatsApp ಚಾನೆಲ್ AI, ಟೆಕ್ ಸುದ್ದಿ, ಸೈಬರ್ ಸುರಕ್ಷತೆ ಮಾಹಿತಿ ಹಾಗೂ ಉಪಯುಕ್ತ ಟೆಕ್ ಟಿಪ್ಸ್ಗಳನ್ನು ಪಡೆಯಲು ನಮ್ಮ WhatsApp ಚಾನೆಲ್ ಸೇರಿ.
ಚಾನೆಲ್ ಸೇರಿ

❤️2026ರಲ್ಲಿ ಮಾಧ್ಯಮ: ನಿಮ್ಮ ಸ್ಮಾರ್ಟ್‌ಫೋನ್‌ನಲ್ಲಿ ಬರುವ ಸುದ್ದಿಗಳ ಅಸಲಿ ಮಾಲೀಕರು ಯಾರು ಗೊತ್ತೇ?

❤️ಫಿಟ್ ಬಿಟ್ 4.68 ಅಪ್‌ಡೇಟ್: ಫಿಟ್‌ನೆಸ್ ಲೋಕದ ಹೊಸ 'ಪರ್ಸನಲ್ ಟ್ರೈನರ್' ಅವತಾರ!

❤️ಕಡಿಮೆ ಬೆಲೆಗೆ ಆರ್ಡರ್ ಮಾಡೋದು ಹೇಗೆ? ಇಲ್ಲಿದೆ ONDC ಮೂಲಕ ನಿಮ್ಮ ಹಣ ಉಳಿಸುವ ಸೀಕ್ರೆಟ್ ಗೈಡ್ !

❤️ಸೋನಿ ಕ್ಯಾಮೆರಾ, ಪವರ್‌ಫುಲ್ ಪ್ರೊಸೆಸರ್ ಮತ್ತು 6,500mAh ಬ್ಯಾಟರಿ ಜೊತೆ ಮೊಟೊ ಎಡ್ಜ್ 70 ಪ್ರೊ ಎಂಟ್ರಿ!

ಸಂಬಂಧಿತ ಲೇಖನಗಳು

Related News ನಮ್ಮ 'ಪೋಟೋಗ್ರಾಫಿಕ್ ಮೆಮರಿ'ಯೂ.. ಎಐನ 'ಅಲ್ಜೈಮರ್ ಖಾಯಿಲೆಯೂ..!
Related News ಟೆಕ್ ವೈದ್ಯ ಗ್ಲೋಬಲ್ - ಏನಿದೆ ನಮ್ಮ ಜಾಲತಾಣದಲ್ಲಿ?
Related News ರಾಜ್ಯೋತ್ಸವ ಪ್ರಶಸ್ತಿಗೆ ಸಾಧಕರನ್ನು ಹುಡುಕುವ ಕಣ್ಣಿಗೆ ಬೇಕಾಗಿದೆ ಪೊರೆ ಚಿಕಿತ್ಸೆ!
Related News ಭೇಡ್ತಿ - ಅಘನಾಶಿನಿ — ಅಣೆಕಟ್ಟು ಇಲ್ಲದ ನದಿ ಏನನ್ನು ಉಳಿಸಿಕೊಂಡಿದೆ?
Related News ನದಿ ತಿರುವಿನ ಉಮೇದಿಯಲ್ಲಿದ್ದವರೇ ಹೇಳಿ; ಸಮುದ್ರಕ್ಕೆ ಹೋಗುವ ನೀರು ಯಾರದ್ದು?

❤️ಬ್ರೌಸರ್ ಗಡಿ ಮೀರಿದ ಕ್ರೋಮ್: ಇದು ಈಗ ಕೇವಲ ವಿಂಡೋ ಅಲ್ಲ, ಎಐ ಏಜೆಂಟ್!

❤️ಆರ್ಮಿ ಆಫೀಸರ್ ಹೆಸರಿನಲ್ಲಿ ನಡೆಯುವ ಅತಿದೊಡ್ಡ ಸ್ಕ್ಯಾಮ್: ವಂಚಕರು ಬಳಸುವ 'ರಿವರ್ಸ್ ಸ್ಕ್ಯಾನ್' ತಂತ್ರವೇನು?

❤️ರ್‍ಯಾಮ್ ಬಿಕ್ಕಟ್ಟು: ಎಐ ದೈತ್ಯರ ನಡುವಿನ ಜಿದ್ದಾಜಿದ್ದಿಗೆ ಬಲಿಯಾಗುತ್ತಿದೆಯೇ ಸಾಮಾನ್ಯರ ಕಂಪ್ಯೂಟರ್?

❤️ಎಐ ಜೂಜಿನಲ್ಲಿ ಈಜಲು 25 ಬಿಲಿಯನ್ ಡಾಲರ್‍‌ ಹೂಡಿದ ಅಮೆಜಾನ್!

🟢 ನಿರಂತರ ಅಪ್ಡೇಟ್‌ ಪಡೆಯಲು ನಮ್ಮ ವಾಟ್ಸಾಪ್‌ ಚಾನೆಲ್‌ ಫಾಲೋ ಮಾಡಿ JOIN ➤

🛒 ಆನ್‌ಲೈನ್‌ ಶಾಪಿಂಗ್ ಮಾಡುವಾಗ ಈ ಕೆಳಗಿನ ಲಿಂಕ್‌ ಬಳಸಿ

🟠 ಅಮೆಜಾನ್‌ನಿಂದ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

🔵 ಫ್ಲಿಪ್‌ಕಾರ್ಟ್‌ನಿಂದ ಖರೀದಿಸಲು ಇಲ್ಲಿ ಕ್ಲಿಕ್ ಮಾಡಿ

Badekkila Pradeep
Badekkila Pradeep Writer, Voiceover Artist
306 Views
ಶೇರ್ ಮಾಡಿ

0 ಕಾಮೆಂಟ್‌ಗಳು

ಇನ್ನೂ ಯಾವುದೇ ಕಾಮೆಂಟ್‌ಗಳಿಲ್ಲ.

ಕಾಮೆಂಟ್ ಮಾಡಿ

ಚಂದಾದಾರರಾಗಿ

ಬ್ರೇಕಿಂಗ್‌ ನ್ಯೂಸ್, ಟ್ರೆಂಡಿಂಗ್ ಸ್ಟೋರಿ ಆಳವಾದ ವಿಶ್ಲೇಷಣೆಗಳನ್ನು ನಿರಂತರವಾಗಿ ಪಡೆಯಲು ಉಚಿತವಾಗಿ ಚಂದಾದಾರರಾಗಿ.

Follow Us
ಜಾಹೀರಾತು

ಸಂಬಂಧಿತ ಸುದ್ದಿ

🔥
📱 WhatsApp 🐦 X 🖼️ Status
Join Now
Promoted

🌐 ವೆಬ್‌ಸೈಟ್ 💬 WhatsApp